ADVERTISEMENT

ಇನ್‌ವೆಸ್ಟ್‌ ಕರ್ನಾಟಕ | ಗುಡ್ಡಗಾಡು ಓಡಾಟಕ್ಕೆ ‘ಅಶ್ವ’ ಬಲ

ಜಯಸಿಂಹ ಆರ್.
Published 13 ಫೆಬ್ರುವರಿ 2025, 22:38 IST
Last Updated 13 ಫೆಬ್ರುವರಿ 2025, 22:38 IST
‘ಎ–ಥಾನ್‌’ನ ‘ಅಶ್ವ 6X6’ ಎಟಿವಿ  -ಪ್ರಜಾವಾಣಿ ಚಿತ್ರ
‘ಎ–ಥಾನ್‌’ನ ‘ಅಶ್ವ 6X6’ ಎಟಿವಿ  -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕ ಮಾತ್ರವಲ್ಲ ದೇಶದ ಬಹುತೇಕ ಕಡೆ ತೋಟಗಾರಿಕೆ, ಗುಡ್ಡಗಾಡು ಪ್ರದೇಶಗಳಲ್ಲಿ ಓಡಾಡಲು, ಕಾರ್ಮಿಕರನ್ನು ಕರೆದೊಯ್ಯಲು  ಈಗಲೂ ಜೀವನಾಡಿಯಂತಿರುವುದು ಟ್ರ್ಯಾಕ್ಟರ್‌ ಮತ್ತು ಅದಕ್ಕೆ ಜೋಡಿಸಿದ ಟ್ರೇಲರ್‌ಗಳು. ಇಂತಹ ಓಡಾಟ ಮತ್ತು ಸಣ್ಣ–ಪುಟ್ಟ ಸರಕುಗಳನ್ನು ಆರಾಮವಾಗಿ ಸಾಗಿಸಲು ಅನುವು ಮಾಡಿಕೊಡುವ ವಾಹನ ಏಕೆ ಇರಬಾರದು ಎಂಬ ಪ್ರಯತ್ನದ ಫಲವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ‘ಅಶ್ವ’ ಎಟಿವಿ ಈಗ ಮಾರುಕಟ್ಟೆಯಲ್ಲಿದೆ.

ಮಲೆನಾಡಿನಲ್ಲಿ ತೋಟಗಳನ್ನು ಹೊಂದಿರುವ ಮತ್ತು ಅಲ್ಲಿನ ಓಡಾಟದ ಅಗತ್ಯಗಳನ್ನು ಕಂಡಿರುವ ನಾಲ್ಕಾರು ಮಂದಿ ಡ್ರಾಯಿಂಗ್‌ಬೋರ್ಡ್‌ ಮೇಲೆ ಮೂಡಿಸಿದ ಕಲ್ಪನೆ ಈಗ ‘ಎ–ಥಾನ್‌ ಆಲ್‌ ಟೆರೇನ್‌ ವೆಹಿಕಲ್‌ ಪ್ರೈ. ಲಿಮಿಟೆಡ್‌’ ಆಗಿ ರೂಪುಗೊಂಡಿದೆ.

ಕೃಷಿ ಎಂಜಿನಿಯರಿಂಗ್‌, ಆಟೊಮೊಬೈಲ್‌ ಎಂಜಿನಿಯರಿಂಗ್‌, ಎಐ ಎಂಜಿನಿಯರಿಂಗ್‌, ಡಿಸೈನ್‌ ಎಂಜಿನಿಯರಿಂಗ್‌ನಲ್ಲಿ ಪರಿಣತಿ ಹೊಂದಿದ ಹಿರಿಯರು ಮತ್ತು ಯುವಕರನ್ನು ಒಳಗೊಂಡ ತಂಡದ ನಾಲ್ಕಾರು ವರ್ಷಗಳ ಶ್ರಮ ‘ಅಶ್ವ’ವನ್ನು ರೂಪಿಸಿದೆ. ಬಂಗಾರಪೇಟೆಯ ದಾಸರಹೊಸಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಹಾಗೂ ತಯಾರಿಕಾ ಘಟಕ ಹೊಂದಿರುವ ಎ–ಥಾನ್‌ ಅಪ್ಪಟ ಕನ್ನಡಿಗರ ಕಂಪನಿ. 

ADVERTISEMENT

‘ಗುಡ್ಡಗಾಡು–ಅರಣ್ಯ ಪ್ರದೇಶಲ್ಲಿ ಸಮೀಕ್ಷೆ–ರಕ್ಷಣಾ ಕಾರ್ಯಾಚರಣೆ, ಪ್ರವಾಹ ಸಂದರ್ಭದ ಕಾರ್ಯಾಚರಣೆಗಳನ್ನೂ ಗಮನದಲ್ಲಿ ಇರಿಸಿಕೊಂಡು ‘ಅಶ್ವ’ವನ್ನು ವಿನ್ಯಾಸ ಮಾಡಲಾಗಿದೆ’ ಎನ್ನುತ್ತಾರೆ ಎ–ಥಾನ್‌ನ ಮುಖ್ಯ ಪ್ರಾಡಕ್ಟ್‌ ಎಂಜಿನಿಯರ್‌ ಅಶ್ವಿನ್‌ ಜಾರ್ಜ್‌. ಇಂಡೊ–ಟಿಬೆಟಿಯನ್‌ ಗಡಿ ಪೊಲೀಸ್‌ ಪಡೆಯ ಓಡಾಟಕ್ಕೆ ಹಲವು ‘ಅಶ್ವ 4x4’ಗಳ ಪೂರೈಕೆ ಆರಂಭವಾಗಿದೆ ಎನ್ನುತ್ತದೆ ಕಂಪನಿ.

  • 956 ಸಿಸಿ ಸಾಮರ್ಥ್ಯದ ವಿ–ಟ್ವಿನ್‌ ಪೆಟ್ರೋಲ್‌ ಎಂಜಿನ್ ಸಿವಿಟಿ ಟ್ರಾನ್ಸ್‌ಮಿಷನ್‌ 4ಅವತರಣಿಕೆಗಳಲ್ಲಿ ಲಭ್ಯ

  • 2–4 ಸೀಟುಗಳ ವಿನ್ಯಾಸದಲ್ಲಿ ಲಭ್ಯ

  • 600–1200 ಕೆ.ಜಿ.ಭಾರ ಹೊರುವ ಸಾಮರ್ಥ್ಯ 1 ಟನ್‌ಗುಡ್ಡಗಾಡು ಪ್ರದೇಶದಲ್ಲಿ ಟ್ರೈಲರ್‌ ಸಮೇತ ಭಾರ ಎಳೆಯುವ ಸಾಮರ್ಥ್ಯ

  • ರಸ್ತೆ ಇಲ್ಲದ ಪ್ರದೇಶದಲ್ಲೂ ಕಾರ್ಯಾಚರಣೆ ಸಾಮರ್ಥ್ಯ ನೀರು ಕೆಸರು ಗದ್ದೆ–ಹೊಲಗಳಲ್ಲಿ ಓಡಾಟಕ್ಕೆ ಅನುಕೂಲವಾಗುವ ಸವಲತ್ತು

  • ಪಿಟಿಒ ಅಗತ್ಯವಿಲ್ಲದ ಕೃಷಿ ಉಪಕರಣಗಳ ಜೋಡಣೆ.

  • ಕುಂಟೆ ಹಲಗೆ ಉಳುಮೆ ಬಿತ್ತನೆ ಔಷಧ ಸಿಂಪಡಣೆ ಉಪಕರಗಳ ಬಳಕೆ

  • ಮೊದಲ ಹಂತದ ಸ್ವಯಂಚಾಲನಾ ಸವಲತ್ತುಗಳು.

  • ₹25 ಲಕ್ಷದಿಂದ ₹35 ಲಕ್ಷ: ವಿವಿಧ ಅವತರಣಿಕೆಗಳ ಬೆಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.