ADVERTISEMENT

ಸ್ನಾನದ ದೃಶ್ಯ ಚಿತ್ರೀಕರಣ: ಮೂವರ ವಿರುದ್ಧ ‘ಪೋಕ್ಸೊ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 19:30 IST
Last Updated 24 ಏಪ್ರಿಲ್ 2019, 19:30 IST

ಗೋಕರ್ಣ: ತಮ್ಮಮಗಳು ಮತ್ತು ಆಕೆಯ ಸ್ನೇಹಿತೆ ಸ್ನಾನ ಮಾಡುತ್ತಿದ್ದುದನ್ನು ಮೊಬೈಲ್‌ನಲ್ಲಿಚಿತ್ರೀಕರಿಸಿಕೊಂಡಆರೋಪದ ಮೇಲೆ, ಮೂವರವಿರುದ್ಧ ಬೆಂಗಳೂರಿನ ಮಹಿಳೆಯೊಬ್ಬರು ಇಲ್ಲಿನ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ.

ಇಲ್ಲಿನ ರೆಸಾರ್ಟ್‌ನಲ್ಲಿ ಏ.20ರಂದು ಚಿತ್ರೀಕರಿಸಲಾಗಿದೆ. ತಮ್ಮ ಪಕ್ಕದ ಕೊಠಡಿಯಲ್ಲಿದ್ದ ಬೆಂಗಳೂರಿನ ಪ್ರವಾಸಿಗರ ಮೇಲೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.ನಿರಂಜನ್, ಪಂಡಿತ್ ಸುಭಾಷ್, ಕೃಷ್ಣನ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ಈ ಮೂವರಲ್ಲಿ ಯಾರೋ ಒಬ್ಬರುಸ್ನಾನಗೃಹದಗೋಡೆಯ ಮೇಲಿನಿಂದ ಮೊಬೈಲ್ ಮೂಲಕ ಫೋಟೊಅಥವಾ ವಿಡಿಯೊಮಾಡಿದ್ದಾರೆದೂರಿನಲ್ಲಿ ತಿಳಿಸಿದ್ದಾರೆ.

ಗೋಕರ್ಣ ಪೊಲೀಸರು ‘ಪೋಕ್ಸೊ’ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.