ADVERTISEMENT

ರಾಜ್ಯೋತ್ಸವ ಪುರಸ್ಕೃತರಲ್ಲಿ ಇಬ್ಬರು ಶತಾಯುಷಿಗಳು!

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2018, 15:12 IST
Last Updated 28 ನವೆಂಬರ್ 2018, 15:12 IST
ಗುರುವ ಕೊರಗ - ಪ್ರಜಾವಾಣಿ ಚಿತ್ರ
ಗುರುವ ಕೊರಗ - ಪ್ರಜಾವಾಣಿ ಚಿತ್ರ   

ಬೆಂಗಳೂರು: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ ಇಬ್ಬರು ಶತಾಯುಷಿಗಳು. ಅದೂ ಸಹ ಉಡುಪಿಯ ಹಿರಿಯಡಕದವರು!

ಹಿರಿಯಡಕ ಬಳಿಯ ಗುಡ್ಡೆಯಂಗಡಿ ನಿವಾಸಿಯಾಗಿರುವ ಜಾನಪದ ಕಲಾವಿದ ಗುರುವ ಕೊರಗ 100 ವರ್ಷಗಳನ್ನು ಕಂಡವರು. ಏಪ್ರಿಲ್‌ 14ರಂದು ಪ್ರಜಾವಾಣಿಗೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಶತಮಾನದ ಅನುಭವವನ್ನು ತೆರೆದಿಟ್ಟಿದ್ದಾರೆ.

ಕರಾವಳಿಯ ಬುಡಕಟ್ಟು ಜನಾಂಗದ ಕೊರಗರು ಅಸ್ಪೃಶ್ಯತೆಯನ್ನು ಇನ್ನಿಲ್ಲದಂತೆ ಅನುಭವಿಸಿರುವ ಸಮುದಾಯ. ಈ ಸಮುದಾಯದವರಾದ ಗುರುವ ಕೊರಗ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

ಸಂದರ್ಶನ ನಿರೂಪಣೆಯ ಪೂರ್ಣ ಪಾಠ: ಗುರುವ ಕೊರಗ ಕರಾವಳಿಯ ನಿಜ ಮಾದರಿ

‘ನನಗೆ ನೂರು ವರ್ಷ ದಾಟಿತಾ? ನನ್ನೊಡನೆ ಇದ್ದವರು ಹಾಗೆ ಹೇಳುತ್ತಾರೆ. ನನ್ನ ಸಮಕಾಲೀನರ ವಯಸ್ಸಿಗೆ ಹೋಲಿಕೆ ಮಾಡಿ ಈ ಲೆಕ್ಕ ಹೇಳುತ್ತಾರೆ. ಆಗಿರಬಹುದೇನೋ!’ ಹೀಗೆಂದು ಪ್ರಜಾವಾಣಿ ಜತೆ ತಮ್ಮ ನೆನಪುಗಳನ್ನು ಈಚೆಗೆ ಹಂಚಿಕೊಂಡಿದ್ದರು ಗುರುವ ಕೊರಗ ಅವರು.

ಇನ್ನೊಬ್ಬ ಹಿರಿಯರು ‘ಮದ್ದಲೆ ಮಾಂತ್ರಿಕ’ ಎಂದೇ ಖ್ಯಾತರಾಗಿರುವ ಹಿರಿಯಡಕ ಗೋಪಾಲ ರಾವ್. 1919ರಲ್ಲಿ ಜನಿಸಿದ ಇವರು ನೂರರ ವಸಂತಕ್ಕೆ ಕಾಲಿಟ್ಟಿದ್ದಾರೆ.

ಹಿರಿಯಡಕ ಗೋಪಾಲ ರಾವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.