ADVERTISEMENT

ಏರೊ ಇಂಡಿಯಾ 2021: ಕೋವಿಡ್ ಇಲ್ಲವೆಂಬ ಪ್ರಮಾಣಪತ್ರ ಕಡ್ಡಾಯ ಆದೇಶ ಹಿಂಪಡೆದ ಸರ್ಕಾರ

ಏರೊ ಇಂಡಿಯಾ ವೈಮಾನಿಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 11:32 IST
Last Updated 4 ಫೆಬ್ರುವರಿ 2021, 11:32 IST
ಏರೊ ಇಂಡಿಯಾ ವೈಮಾನಿಕ ಪ್ರದರ್ಶನ
ಏರೊ ಇಂಡಿಯಾ ವೈಮಾನಿಕ ಪ್ರದರ್ಶನ   

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ 'ಏರೊ ಇಂಡಿಯಾ 2021’ ರಲ್ಲಿ ಭಾಗವಹಿಸುವುದಕ್ಕೆ ಕೋವಿಡ್ ಪರೀಕ್ಷೆ ಯಲ್ಲಿ ಸೋಂಕು ಇಲ್ಲ ಎಂಬ ಪ್ರಮಾಣಪತ್ರ ಹೊಂದಿರಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.

ಈ ವೈಮಾನಿಕ ಪ್ರದರ್ಶನ ಪ್ರದೇಶದಲ್ಲಿ ಪ್ರವಾಸಿಗರು ಪರಸ್ಪರ‌ ಅಂತರ ಕಾಪಾಡುವುದಕ್ಕೆ ಅನುಕೂಲಕರವಾಗಿ ಆಸನ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಹರಡದಂತೆ ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಹಾಗಾಗಿ ಪ್ರದರ್ಶನಕ್ಕೆ ಬರುವವರು ಕೋವಿಡ್ ಸೋಂಕು ಹೊಂದಿಲ್ಲ ಎಂಬ ಪ್ರಮಾಣಪತ್ರ ಹೊಂದಿರಬೇಕಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಆದೇಶ ಮಾಡಿದೆ.

ಕೋವಿಡ್ ಸೋಂಕಿಲ್ಲ ಎಂಬ ಪ್ರಮಾಣಪತ್ರ ಕಡ್ಡಾಯ ಮಾಡಿದ್ದರಿಂದ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಬರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಎರಡನೇ ದಿನವೂ ಸೀಮಿತ ಸಂಖ್ಯೆಯ ಪ್ರೇಕ್ಷಕರಿದ್ದರು.

ADVERTISEMENT

ಪ್ರತಿ ಬಾರಿಯೂ ಜನರಿಂದ ಗಿಜಿಗುಡುತ್ತಿದ್ದ ಪ್ರದರ್ಶನದ ಪ್ರದೇಶ ಈ ಬಾರಿ ಖಾಲಿ ಹೊಡೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.