ADVERTISEMENT

‘ರೋ‌ಗ ಮುಕ್ತರಾಗಲು ಸಿರಿಧಾನ್ಯ ಬಳಸಿ’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 19:34 IST
Last Updated 18 ಏಪ್ರಿಲ್ 2022, 19:34 IST

ಬೆಂಗಳೂರು: ‘ಅಕ್ಕಿ, ಸಕ್ಕರೆ ಹಾಗೂ ಗೋಧಿಯ ಅತಿಯಾದ ಬಳಕೆಯಿಂದ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ. ರೋಗಗಳಿಂದ ಮುಕ್ತರಾಗಿರಲು ನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳನ್ನು ಯಥೇಚ್ಛವಾಗಿ ಬಳಸಬೇಕು’ ಎಂದುಆಹಾರ ತಜ್ಞ ಡಾ.ಖಾದರ್ ತಿಳಿಸಿದರು.

ಗ್ರಾಮೀಣ ಅಂಗಡಿ ಹಮ್ಮಿಕೊಂಡಿದ್ದ‘ದೇಸಿ ಆಹಾರ–ದೇಹದ ಆರೋಗ್ಯಕ್ಕೆ ಆಧಾರ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಾಲು, ಅಡುಗೆ ಎಣ್ಣೆ ಹಾಗೂ ಸಕ್ಕರೆಯ ಸೇವನೆಯಿಂದ ಅಪಾಯ ಹೆಚ್ಚು. ಈಗ ಹಸುಗಳಿಗೆ ಸ್ಟಿರಾಯಿಡ್‌ಗಳನ್ನು ಚುಚ್ಚಲಾಗುತ್ತಿದೆ. ಅದರಿಂದ ಸ್ಟಿರಾಯಿಡ್‌ನ ವಿಷಕಾರಿ ಅಂಶ ಹಾಲಿಗೆ ಸೇರುತ್ತದೆ. ಆ ಹಾಲನ್ನು ಸೇವಿಸುವ ಬಾಲಕಿಯರು 8 ರಿಂದ 10ನೇ ವಯಸ್ಸಿನಲ್ಲೇ ಋತುಮತಿಗಳಾಗುತ್ತಾರೆ’ ಎಂದು ಹೇಳಿದರು.

ADVERTISEMENT

ಗ್ರಾಮೀಣ ಕರಕುಶಲ ಉದ್ಯಮದ ಸಂಸ್ಥಾಪಕ ಸದಸ್ಯ ಬಿ.ರಾಜಶೇಖರಮೂರ್ತಿ, ‘ಗ್ರಾಮೀಣ ಕರಕುಶಲ ಉದ್ಯಮವು ನೈಸರ್ಗಿಕವಾಗಿ ತಯಾರಾಗುವ ಪರಿಶುದ್ಧ ಆಹಾರ ಪದಾರ್ಥಗಳನ್ನು ಗ್ರಾಮೀಣ ಅಂಗಡಿಗಳ ಮೂಲಕ ಗ್ರಾಹಕರಿಗೆ ತಲುಪಿಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.