ಬೆಂಗಳೂರು: ಈ ವರ್ಷದ ಏಪ್ರಿಲ್‌ನಿಂದ ಜುಲೈವರೆಗೆ ₹13,763 ಕೋಟಿ ಜಿಎಸ್‌ಟಿ ಪರಿಹಾರ ರಾಜ್ಯಕ್ಕೆ ಬರಬೇಕಾಗಿದ್ದು, ಅದನ್ನು ಪಡೆಯಲು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಜಿಎಸ್‌ಟಿ ಅನುಷ್ಠಾನ ಕುರಿತಂತೆ ವರ್ಚ್ಯುವಲ್ ರೂಪದಲ್ಲಿ ನಡೆದ ಸಚಿವರ ಮಂಡಳಿಯ 14 ನೇ ಸಭೆಯಲ್ಲಿ ಕರ್ನಾಟಕದ ಸರ್ಕಾರದ ಪರವಾಗಿ ಬೊಮ್ಮಾಯಿ ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರುತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಬಾಕಿ ಇರುವ, ಮರುಪಾವತಿ ಮಾಡಬೇಕಾಗಿರುವ ತೆರಿಗೆ ಮೊತ್ತವನ್ನು ಕೂಡಲೇ ತೆರಿಗೆದಾರರಿಗೆ ಪಾವತಿಸಬೇಕು. ಇದಕ್ಕೆ ಯಾವುದೇ ನೆಪ ಹೇಳಬಾರದು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಈವರೆಗೆ 2 ಲಕ್ಷ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ₹52,251 ಕೋಟಿ ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಣ್ಣ, ಅತಿ ಸಣ್ಣ ವ್ಯಾಪಾರಸ್ಥರು ಶೂನ್ಯ ತೆರಿಗೆ ಮೊತ್ತದ ದಾಖಲೆಗಳನ್ನು ಎಸ್‌ಎಂಎಸ್ ಸಂದೇಶದ ಮೂಲಕ ಒದಗಿಸುವ ಬಗ್ಗೆ ಇನ್ನೂ ಹೆಚ್ಚು ಪ್ರಚಾರ ನೀಡಬೇಕು ಎಂದು ಸಲಹೆ ನೀಡಲಾಯಿತು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.