ಬೆಂಗಳೂರು: ಭಾರತೀಯ ವಾಯುಪಡೆಗೆ ತರಬೇತಿ ವಿಮಾನಗಳನ್ನು ಪೂರೈಸುವ ಒಪ್ಪಂದಕ್ಕೆ ಹಿಂದುಸ್ಥಾನ್ ಏರೊನಾಟಿಕ್ ಲಿಮಿಟೆಡ್ (ಎಚ್‌ಎಎಲ್) ಗುರುವಾರ ಸಹಿ ಹಾಕಿತು.
ಏರ್ ಶೋ ಸಂದರ್ಭದಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ಸಂಬಂಧ ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಹಾಗೂ ಏರ್ ಮಾರ್ಷಲ್ ಸಂದೀಪ್ ಸಿಂಗ್ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು. ರಕ್ಷಣಾ ಇಲಾಖೆಯ ಪ್ರಧಾನ ನಿರ್ದೇಶಕ (ಸ್ವಾಧೀನ) ವಿ.ಎಲ್. ಕಾಂತರಾವ್ ಇದ್ದರು.
70 ವಿಮಾನಗಳನ್ನು ಪೂರೈಕೆ ಸಂಬಂಧ ಈ ಒಪ್ಪಂದ ನಡೆದಿದೆ. ಎಚ್‌ಎಎಲ್‌ನ ಬೆಂಗಳೂರು ಮತ್ತು ನಾಸಿಕ್ ಘಟಕದಲ್ಲಿ ಈ ವಿಮಾನಗಳ ನಿರ್ಮಾಣ ಕಾರ್ಯ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.