ADVERTISEMENT

ಎಚ್‌ಎಎಲ್‌ ಸಂಸ್ಥಾಪಕರಿಗೆ 86 ವರ್ಷದ ನಂತರ ದೊರಕಿದ ಗೌರವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಡಿಸೆಂಬರ್ 2025, 14:36 IST
Last Updated 23 ಡಿಸೆಂಬರ್ 2025, 14:36 IST
   

ಬೆಂಗಳೂರು: ಭಾರತದ ವೈಮಾನಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್‌(ಎಚ್‌ಎಎಲ್‌), ತನ್ನ ಸಂಸ್ಥಾಪಕರಿಗೆ 86 ವರ್ಷಗಳ ನಂತರ ಕೊನೆಗೂ ಗೌರವ ಸಲ್ಲಿಸಿದೆ. 

ಡಿ.23ರಂದು ಬೆಂಗಳೂರಿನಲ್ಲಿ ಜರುಗಿದ ಹಿಂದೂಸ್ಥಾನ್‌ ಏರೋನಾಟಿಕ್ಸ್ ಲಿಮಿಟೆಡ್‌ನ 86ನೇ ಸಂಸ್ಥಾಪನಾ ದಿನದಂದು ಜಯಚಾಮರಾಜೇಂದ್ರ ಒಡೆಯರ್‌ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಗೌರವಿಸಲಾಗಿದೆ.

ಒಡೆಯರ್ ಅವರ ವಂಶಸ್ಥರಾದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಎಚ್‌ಎಎಲ್‌ ಮ್ಯಾನೇಜ್‌ಮೆಂಟ್‌ ಅಕಾಡೆಮಿ(ಎಚ್‌ಎಂಎ) ನೂತನ ಕ್ಯಾಂಪಸ್‌ನಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಿದರು.

ADVERTISEMENT

ಎಚ್‌ಎಎಲ್‌ ಮತ್ತು ಜಯಚಾಮರಾಜೇಂದ್ರ ಒಡೆಯರ್‌:

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಮೈಸೂರು ಸಂಸ್ಥಾನದ ರಾಜನ ಪಟ್ಟಕ್ಕೇರಿದ ಜಯಚಾಮರಾಜೇಂದ್ರ ಒಡೆಯರ್‌ ಅವರು ದೂರದೃಷ್ಟಿಯುಳ್ಳ ನಾಯಕರಾಗಿದ್ದರು. ಕೇವಲ 21 ವರ್ಷವಿದ್ದಾಗಲೇ  ಹಿಂದೂಸ್ಥಾನ್‌ ಏರೋನಾಟಿಕ್ಸ್ ಲಿಮಿಟೆಡ್‌ನ ಸ್ಥಾಪಿಸಿದ್ದರು.

ಮೈಸೂರಿನ ಕೊನೆಯ ಮಹಾರಾಜ ಎಂದೇ ಖ್ಯಾತರಾಗಿರುವ ಜಯಚಾಮರಾಜೇಂದ್ರ ಒಡೆಯರ್‌ ಅವರು ಎಚ್ಎಎಲ್‌ ಸ್ಥಾಪನೆಗೆ ಅಗತ್ಯವಾಗಿದ್ದ 700 ಎಕರೆ ಭೂಮಿ, ₹25 ಲಕ್ಷ ಅನುದಾನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದರು. 

ಎಚ್ಎಎಲ್‌ ಸ್ಥಾಪನೆಯ ಒಂಬತ್ತು ದಶಕಗಳ ಬಳಿಕ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ, ಕೊನೆಗೂ ಎಚ್‌ಎಎಲ್‌ ಜಯಚಾಮರಾಜೇಂದ್ರ ಒಡೆಯರ್‌ ಗೌರವ ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.