ADVERTISEMENT

ಬೇಳೂರು ಸವಾಲು ಸ್ವೀಕರಿಸಿದ ಹಾಲಪ್ಪ

‘ಸಿಗಂದೂರು ಚೌಡೇಶ್ವರಿ ಮೇಲೆ ಆಣೆ ಮಾಡಲಿ’

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 19:22 IST
Last Updated 4 ನವೆಂಬರ್ 2018, 19:22 IST
ಹಾಲಪ್ಪ ಹರತಾಳು
ಹಾಲಪ್ಪ ಹರತಾಳು   

ಶಿವಮೊಗ್ಗ: ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿಯನ್ನು ಮುಚ್ಚಿ ಹಾಕಿಲ್ಲ ಎಂದು ಸಿಗಂದೂರು ದೇವಿಯ ಮೇಲೆ ಮಾಡಲಿ ಎಂದುಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಬೇಳೂರು ಈಚೆಗೆ ಹಾಕಿದ್ದಸವಾಲನ್ನು ಶಾಸಕ ಎಚ್. ಹಾಲಪ್ಪ ಹರತಾಳು ಸ್ವೀಕರಿಸಿದ್ದಾರೆ.

‘ಬೇಳೂರು ಬಯಸಿದ್ದಲ್ಲಿ ನಾನು ಪತ್ನಿ ಸಮೇತ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಬಂದು, ಅತ್ಯಾಚಾರ ಆರೋಪದಲ್ಲಿ ದೋಷಮುಕ್ತನಾಗಿದ್ದೇನೆ. ಶರಾವತಿ ಡೆಂಟಲ್ ಕಾಲೇಜು ಈಡಿಗ ಸಮಾಜಕ್ಕೆ ಸೇರಿದೆ ಎಂದು ಬಂಗಾರಪ್ಪ ಅವರು ನನ್ನ ಬಳಿ ಹೇಳಿರುವ ಬಗ್ಗೆ ದೇವಿಯ ಮೇಲೆ ಆಣೆ ಮಾಡಿ ಹೇಳಲು ಸಿದ್ಧನಾಗಿದ್ದೇನೆ. ಹಾಗೆಯೇ ನಾನು ದೇವಿಯ ಮುಂದೆ ಒಂದು ಪಟ್ಟಿಯನ್ನ ಬೇಳೂರು ಗೋಪಾಲಕೃಷ್ಣ ಅವರಿಗೆ ನೀಡುವೆ. ಆ ಪಟ್ಟಿಯಲ್ಲಿ ಇರುವರೊಂದಿಗೆತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಪ್ರಮಾಣ ಮಾಡಬೇಕು’ ಎಂದುಭಾನುವಾರ ಪತ್ರಿಕಾಗೋಷ್ಠಿಯಲ್ಲಿಪ್ರತಿ ಸವಾಲು ಹಾಕಿದರು.

‘ಬೇಳೂರು ಈ ವಿಚಾರದಲ್ಲಿ ಆಣೆ ಮಾಡಿದ್ರೆ ಮಾತ್ರ ಉತ್ತರ ನೀಡುವೆ. ಆಣೆ ಮಾಡಲು ಅವರ ಪತ್ನಿ ಮತ್ತು ಮಧು ಬಂಗಾರಪ್ಪ ಅವರನ್ನ ಸಾಕ್ಷಿಯಾಗಿ ಕರೆದುಕೊಂಡು ಬರಲಿ. ಒಂದು ವೇಳೆ ಬೇಳೂರು ಬಾರದಿದ್ದರೆ ನನ್ನ ಮೇಲೆ ಅವರು ಮಾಡುವ ಆರೋಪಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಬೇಳೂರು ಒಬ್ಬ ಪಲಾಯನವಾದಿಯಾಗಲಿದ್ದಾರೆ’ ಎಂದು ಛೇಡಿಸಿದರು.

ADVERTISEMENT

‘ಲೈಂಗಿಕ ಆರೋಪವನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದ್ದು, ಮಾನಸಿಕವಾಗಿ ಅವರೊಬ್ಬ ಆರೋಪಿ ಎಂದು ಹೇಳಿಕೆ ನೀಡಿದ್ದಾರೆ. ಇದು ಮಾಧ್ಯಮದಲ್ಲಿ ಬಿಂಬಿತವಾಗಿದೆ.ಇದು ನ್ಯಾಯಾಲಯದ ಉಲ್ಲಂಘನೆಯಾಗಲಿದೆ ಎಂಬುದು ನನ್ನ ತಿಳಿವಳಿಕೆ. ಈ ಕುರಿತು ವಕೀಲರನ್ನ ಸಂಪರ್ಕಿಸಿ, ಇಂತಹ ಆರೋಪದ ಬಗ್ಗೆಯೂ ಬೇಳೂರು ಅವರಿಗೆ ನೋಟಿಸ್ ನೀಡಲಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.