ಬೆಂಗಳೂರು: ಸ್ನೇಹಿತನ ಮನೆಗೆ ರಾತ್ರಿ ನುಗ್ಗಿ, ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್‌ನಿಂದ ಆತನ ಕತ್ತು ಸೀಳಿ ಕೊಲೆ ಮಾಡಿದ್ದ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
‘2021ರ ಡಿಸೆಂಬರ್ 24ರಂದು ಮರ್ಫಿಟೌನ್ ನಿವಾಸಿ ವಿನ್ಯುಸ್ ಕೊಲೆ ನಡೆದಿತ್ತು. ಮುಖ್ಯ ಆರೋಪಿ ಸಂತೋಷ್‌ನನ್ನು ಮರುದಿನವೇ ಬಂಧಿಸಲಾಗಿತ್ತು. ಅಜಯ್ ಎಂಬಾತನನ್ನು ಈಗ ಬಂಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ್ದ ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.