ADVERTISEMENT

ಪ್ರವಾಹದಿಂದ ಉಕ್ಕಿ ಹರಿದ ಹರಿಹರ ಹೊಳೆ; ಶರೀಫ್‌ರನ್ನು ರಕ್ಷಿಸಿದ ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 20:45 IST
Last Updated 3 ಆಗಸ್ಟ್ 2022, 20:45 IST
ಸೋಮಶೇಖರ್ (ಕೆಂಪು ಟೀಶರ್ಟ್) ಹಾಗೂ ಶರೀಫ್
ಸೋಮಶೇಖರ್ (ಕೆಂಪು ಟೀಶರ್ಟ್) ಹಾಗೂ ಶರೀಫ್   

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಸುಳ್ಯ ತಾಲ್ಲೂಕಿನ ಹರಿಹರ ಪಲ್ಲತ್ತಡ್ಕದಲ್ಲಿ ಸೇತುವೆಗೆ ಅಪ್ಪಳಿಸಿದ್ದ ಮರಗಳನ್ನು ತೆರವುಗೊಳಿಸುವ ವೇಳೆ ಆಯತಪ್ಪಿ ನದಿಗೆ ಬಿದ್ದ ಜೆಸಿಬಿ ಆಪರೇಟರ್‌ ಅನ್ನು, ಪ್ರವಾಹದ ಅಪಾಯ ಲೆಕ್ಕಿಸದೆ ಸ್ಥಳೀಯ ವ್ಯಕ್ತಿಯೊಬ್ಬರು ರಕ್ಷಿಸಿದ್ದಾರೆ.

ಹರಿಹರ ಹೊಳೆಯ ಸೇತುವೆಯ ಬದಿಯಲ್ಲಿ ಸಿಲುಕಿಕೊಂಡಿದ್ದ ಮರದ ದಿಮ್ಮಿಗಳನ್ನು ಜೆಸಿಬಿ ಚಾಲಕ ಶರೀಫ್ ಮಂಗಳವಾರ ಸಂಜೆ ತೆರವುಗೊಳಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದಿದ್ದಾರೆ. ಇದನ್ನು ಕಂಡ ಸೋಮಶೇಖರ್ ಕಟ್ಟೆಮನೆ ತಕ್ಷಣ ನೀರಿಗೆ ಜಿಗಿದು, ತಮ್ಮ ಪ್ರಾಣದ ಹಂಗುತೊರೆದು ಶರೀಫ್ ಅವರನ್ನು ರಕ್ಷಿಸಿದ್ದಾರೆ.

ಸ್ಥಳದಲ್ಲಿದ್ದವರು ಈ ದೃಶ್ಯವನ್ನು ವಿಡಿಯೊ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ‘ಸಾಮಾಜಿಕ ಜಾಲತಾಣದಲ್ಲಿ ನಾವಿಬ್ಬರು ಹಿಂದೂ–ಮುಸ್ಲಿಂ ಎಂದು ಬಿಂಬಿಸುತ್ತಿದ್ದಾರೆ. ಆ ಕ್ಷಣದಲ್ಲಿ ಹೊಳೆಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸುವುದಷ್ಟೇ ನನ್ನ ಗುರಿಯಾಗಿತ್ತು. ಆಗ ನಾನು ಅಲ್ಲಿ ಧರ್ಮ ಯಾವುದೆಂದು ನೋಡಲಿಲ್ಲ. ನಮ್ಮಿಬ್ಬರ ಧರ್ಮ ಬೇರೆ ಇರಬಹುದು, ಆದರೆ, ಎಲ್ಲರ ಜೀವವೂ ಒಂದೇ’ ಎಂದು ಸೋಮಶೇಖರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT