ADVERTISEMENT

ಸಂತ್ರಸ್ತರ ಬಗ್ಗೆ ರಾಜ್ಯ, ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯದಿಂದ ಬೇಸರ: ದೇವೇಗೌಡ

ನೆರೆ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಆಗ್ರಹಿಸಿ ನಡೆದ ಪ್ರತಿಭಟನೆ ಬೆಂಬಲಿಸಿದವರಿಗೆ ಜೆಡಿಎಸ್ ವರಿಷ್ಠರ ಧನ್ಯವಾದ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 10:44 IST
Last Updated 10 ಅಕ್ಟೋಬರ್ 2019, 10:44 IST
ಎಚ್.ಡಿ.ದೇವೇಗೌಡ (ಸಂಗ್ರಹ ಚಿತ್ರ)
ಎಚ್.ಡಿ.ದೇವೇಗೌಡ (ಸಂಗ್ರಹ ಚಿತ್ರ)   

ಬೆಂಗಳೂರು:ನೆರೆ ಸಂತ್ರಸ್ತರ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆದುಕೊಂಡ ರೀತಿ ನೋವು ತರಿಸಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಜೆಡಿಎಸ್ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯ ನಂತರ ಮಾತನಾಡಿದ ಅವರು, ‘ನಮ್ಮ ನಿರಿಕ್ಷೆಗೆ ಮಿರಿ ಇವತ್ತಿನ ಪ್ರತಿಭಟನೆಯಲ್ಲಿ ಜನ ಸೇರಿದ್ದಾರೆ. ಅವರಿಗೂ ಮಾದ್ಯಮಗಳು ಇವತ್ತಿನ ಪ್ರತಿಭಟನೆಗೆ ನೀಡಿದ ಸಹಕಾರಕ್ಕೂ ನಾನು ತಲೆ ಬಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇನೆ’ ಎಂದರು.

‘ನಮ್ಮ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರ್ಣ ಕಠೋರವಾಗಿ ಮಾತನಾಡುತ್ತಾರೆ. ಆದರೆ ಅವರ ಬಗ್ಗೆ ನಾನು ಕೇವಲವಾಗಿ ಮಾತನಾಡುವುದಿಲ್ಲ. ಅಪ್ಪ ಮಕ್ಕಳನ್ನು ಮುಗಿಸುವುದೆ ನನ್ನ ಗುರಿ ಅಂತಾ ಅವರು ಹೇಳುತ್ತಾರೆ. ಯಾಕಪ್ಪಾ..? ಎನ್ ತಪ್ಪು ಮಾಡಿದ್ದೇವೆ ನಾವು? ಜನರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಿ ಬಂದವರು ನಾವು. ನಮ್ಮನ್ನು ಮುಗಿಸುವುದು ಬಿಡುವುದು ಈ ರಾಜ್ಯದ ಜನರಿಂದ ಮಾತ್ರ ಸಾಧ್ಯ. ಯಡಿಯೂರಪ್ಪನವರೇ ನಿಮ್ಮಂತಹ ನಾಯಕರಿಂದ ಸಾಧ್ಯವಿಲ್ಲ. ಮೊದಲು ರಾಜ್ಯದ ಸಂಕಷ್ಟವನ್ನು ನಿವಾರಣೆ ಮಾಡಿ ನಂತರ ರಾಜಕೀಯ ಮಾಡಿ’ ಎಂದು ದೇವೇಗೌಡ ಹೇಳಿದರು.

‘ನಾನು ಇಂದು ಸಂಸತ್ತಿಗೆ ಹೋಗುವ ಶಕ್ತಿ ಕಳೆದುಕೊಂಡಿದ್ದೇನೆ. ಆದರೆ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ರಾಜ್ಯದ ಜನರಿಗಾಗಿ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ.ಕುಮಾರಸ್ವಾಮಿಯವರು ನವೆಂಬರ್ 1ರಿಂದ ರಾಜ್ಯದ ಜನತೆಗಾಗಿ ಹೋರಾಟ ಮಾಡುತ್ತಾರೆ. ನೀವೇಲ್ಲಾ ಅದಕ್ಕೆ ಸಹಕಾರ ಕೋಡಬೇಕು. ಅದರ ಹೊರತಾಗಿ ನಾನು ಎನನ್ನೂ ಮಾತನಾಡುವುದಿಲ್ಲ’ ಎಂದು ಅವರು ಹೇಳಿದರು.

‘ಜೆಡಿಎಸ್ ಪಕ್ಷ ಇರೋದು ಒಂದು ಕುಟುಂಬಕ್ಕಾಗಿ ಅಲ್ಲ. ರಾಜ್ಯದ ಜನರ ಅಭಿವೃದ್ಧಿಗಾಗಿ. ನಾನು ಹೋದ ಮೇಲೆಯೂ ರಾಜ್ಯದಲ್ಲಿ ಜೆಡಿಎಸ್ ಇರಬೇಕು’ ಎಂದು ಅವರು ಹೇಳಿದರು.

ನೆರೆಯಿಂದಾಗಿ ಎಷ್ಟು ನಷ್ಟ ಆಗಿದೆ ಅಂತ ರಾಜ್ಯ ಸರ್ಕಾರ ಕೇಂದ್ರಕ್ಕೆ ಅಂದಾಜು ಪಟ್ಟಿ ಕಳುಹಿಸಿದೆ. ಲೋಪದೋಷ ಇದೆ ಅಂತ ಹೇಳಿದ ಬಳಿಕ, ಸರಿಪಡಿಸಿ ಕಳುಹಿಸಲಾಗಿತ್ತು. ಅದಾದ ಬಳಿಕ ಬಂದಿದ್ದು ಕೇವಲ ₹ 1200 ಕೋಟಿಯಷ್ಟೇ. ಎರಡೂ ಕಡೆ ಒಂದೇ ಸರ್ಕಾರವಿದ್ದರೂ ಇವರ ನಡವಳಿಕೆ ಬೇಸರ ತರಿಸಿದೆ’ ಎಂದು ದೇವೇಗೌಡ ಹೇಳಿದರು.

‘ಬೆಳಗಾವಿ ಜಿಲ್ಲೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಇದು ಇವತ್ತಿನ ಸರ್ಕಾರಗಳಿಗೆ ತಿಳಿಯುತ್ತಿಲ್ಲವೇ? ಅಂದು ಮೈತ್ರಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ಪ್ರಕೃತಿ ವಿಕೋಪಕ್ಕೆ ತಕ್ಷಣ ಹಣ ಬಿಡುಗಡೆ ಮಾಡಿದ್ದೇವೆ. ಪರಿಹಾರ ಬಿಡುಗಡೆ ವಿಚಾರವನ್ನು ಇಲ್ಲಿಗೆಬಿಡುವುದಿಲ್ಲ, ಕೂಡಲೇ ಹಣ ಬಿಡುಗಡೆ ಮಾಡಲೇಬೇಕು. ಅವರು ಪ್ರಧಾನ ಮಂತ್ರಿಗಳು, ಅವರಿಗೆ ಗೌರವ ಕೊಡಬೇಡಿ ಅಂತ ನಾನು ಹೇಳುವುದಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ. ₹ 1200 ಕೋಟಿ ಎಲ್ಲಿ ಸಾಕಾಗುತ್ತದೆ? ತಕ್ಷಣ ಹೆಚ್ಚಿನ ಹಣ ಬಿಡುಗಡೆ ಮಾಡಲೇಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದರು.

ಜೆಡಿಎಸ್ ಪಕ್ಷವನ್ನು ಬಿಜೆಪಿಯ ‘ಬಿ ಟೀಂ’ ಅಂತ ಟೀಕೆ ಮಾಡಿದ್ದರು. ಒಂದು ರಾಷ್ಟ್ರೀಯ ಪಕ್ಷದ ಮಾಜಿ ಅಧ್ಯಕ್ಷರಾಗಿದ್ದವರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆಆ ಮಾತು ನನಗೆ ಬಹಳಷ್ಟು ನೋವು ತಂದಿದೆ. ಅದು ಅವರಾಗಿಯೇ ಹೇಳಿದ್ದು ಅಲ್ಲ. ಅವರ ಕಡೆಯಿಂದ ಬೇರೆ ಯಾರೋ ಹೇಳಿಸಿದ್ದು ಎಂದು ದೇವೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.