
ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಕೊಳ್ಳೆ, ಸುಲಿಗೆ ಮತ್ತು ಒದ್ದು ಕಿತ್ತುಕೊಳ್ಳುವ ಅನುಭವ ನನಗಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕುಟುಕಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಮ್ಮ ಪಕ್ಷದ ವಿಲೀನದ ಚಿಂತೆ ನಿಮಗೆ ಬೇಕಿಲ್ಲ. ನನ್ನ ಮತ್ತು ನಿಮ್ಮ ಅನುಭವದ ಬಗ್ಗೆ ಮಾತನಾಡೋಣ. ಜನರ ಆಶೀರ್ವಾದದಿಂದ ಸಿಕ್ಕಿದ ಅವಕಾಶದಲ್ಲಿ ಜನರಿಗೆ ನನ್ನ ಕೈಲಾಗುವಷ್ಟು ಸಹಾಯ ಮಾಡುವ ಹುಲು ರಾಜಕಾರಣಿ ನಾನು’ ಎಂದಿದ್ದಾರೆ.
‘ಭೂಕಬಳಿಕೆ, ಒತ್ತುವರಿ ನಿಮಗೆ ಕರತಲಾಮಲಕ. ಉಪ ಮುಖ್ಯಮಂತ್ರಿ ಎಂದೊಡನೆ, ನಿಮಗೆ ಎರಡು ಕೊಂಬು ಇರುವುದಿಲ್ಲ. ನೀವು ಕೊಂಬು ಸಿಗಿಸಿಕೊಳ್ಳುವುದಕ್ಕೂ ಆಗುವುದಿಲ್ಲ. ಮತ್ತೊಬ್ಬ ಸಚಿವರ ಅಧಿಕಾರ ಒತ್ತುವರಿ ಮಾಡುವುದರಲ್ಲೂ ನೀವು ನಿಸ್ಸೀಮ’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.