ಬೆಂಗಳೂರು:ಕೊರೊನಾ ವೈರಾಣುವಿನ ಬಿ.1.1529 ತಳಿಯು ದಕ್ಷಿಣ ಆಫ್ರಿಕಾ ಸೇರಿದಂತೆ ಮೂರು ದೇಶಗಳಲ್ಲಿ ಪತ್ತೆಯಾಗಿರುವುದರಿಂದ ವಿದೇಶಗಳಿಂದ ಇಲ್ಲಿಗೆ ಬರುವವರನ್ನು ಕೋವಿಡ್ ತಪಾಸಣೆ ಮತ್ತು ಪರೀಕ್ಷೆಗೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಈ ಬಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ‘ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ ಹಾಗೂ ಹಾಂಕಾಂಗ್‌ನಲ್ಲಿ ಹೊಸ ತಳಿಯ ಪ್ರಕರಣಗಳು ಪತ್ತೆಯಾಗಿವೆ. ಈ ತಳಿಯು ವೇಗವಾಗಿ ಹರಡುವಿಕೆ ಗುಣ ಹೊಂದಿದೆ. ಹೀಗಾಗಿ, ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷಿಸಿ, ಅವರ ಮೇಲೆ ನಿಗಾ ಇಡಬೇಕು’ ಎಂದು ತಿಳಿಸಿದ್ದಾರೆ.
‘ಮೂರು ದೇಶಗಳು ಹೆಚ್ಚಿನ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಅಲ್ಲಿಂದ ಹಾಗೂ ಆ ದೇಶಗಳ ಮಾರ್ಗವಾಗಿ ಬರುವವರ ಮಾದರಿಗಳನ್ನು ಸಂಗ್ರಹಿಸಬೇಕು. ಸೋಂಕು ದೃಢಪಟ್ಟಲ್ಲಿವೈರಾಣು ಅನುಕ್ರಮಣಿಕೆ ಪರೀಕ್ಷೆ (ಜೀನೋಮ್ ಸೀಕ್ವೆನ್ಸಿಂಗ್) ನಡೆಸಬೇಕು. ಅವರ ಸಂಪರ್ಕಿತರನ್ನೂ ಪತ್ತೆ ಮಾಡಿ, ಪರೀಕ್ಷೆ ಮಾಡಬೇಕು’ ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.