ADVERTISEMENT

ಗಾಳಿಗೆ ಪತ್ರಾಸ್‌ ಉರುಳಿ ಮೂವರಿಗೆ ಗಾಯ, ಮರ ಬಿದ್ದು ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 25 ಮೇ 2023, 13:54 IST
Last Updated 25 ಮೇ 2023, 13:54 IST
ಚಿಕ್ಕರೂಗಿ ಗ್ರಾಮದಲ್ಲಿ ಬುಧವಾರ ಬೀಸಿದ ರಭಸವಾದ ಗಾಳಿಗೆ ರಾಜ್ಯಹೆದ್ದಾರಿ 41ರಲ್ಲಿನ ಮರದ ಬೃಹತ್ ಟೊಂಗೆ ಮುರಿದು ಬಿದ್ದಿರುವುದು
ಚಿಕ್ಕರೂಗಿ ಗ್ರಾಮದಲ್ಲಿ ಬುಧವಾರ ಬೀಸಿದ ರಭಸವಾದ ಗಾಳಿಗೆ ರಾಜ್ಯಹೆದ್ದಾರಿ 41ರಲ್ಲಿನ ಮರದ ಬೃಹತ್ ಟೊಂಗೆ ಮುರಿದು ಬಿದ್ದಿರುವುದು   

ದೇವರಹಿಪ್ಪರಗಿ: ಚಿಕ್ಕರೂಗಿ ಗ್ರಾಮದಲ್ಲಿ ಬುಧವಾರ ಸಂಜೆ ಬೀಸಿದ ರಭಸವಾದ ಗಾಳಿಗೆ ಅಂಗಡಿಯ ಮೇಲಿದ್ದ ಪತ್ರಾಸ್ ಬಿದ್ದು ಮೂವರು ಗಾಯಗೊಂಡಿದ್ದಾರೆ. ರಾಜ್ಯಹೆದ್ದಾರಿ 41 ರಲ್ಲಿನ ಮರದ ಬೃಹತ್ ಟೊಂಗೆಯೊಂದು ಮುರಿದು ಸಂಚಾರಕ್ಕೆ ಕೆಲಕಾಲ ಅಡತಡೆ ಆಯಿತು.

ಇಲ್ಲಿನ ಬಸ್ ನಿಲ್ದಾಣದ ಹತ್ತಿರದ ಅಂಗಡಿಯೊಂದರ ಪತ್ರಾಸ್‌ಗಳು ಉರುಳಿ ಮುಂದೆ ಕುಳಿತಿದ್ದ ಸಾರಿಗೆ ಬಸ್ ಚಾಲಕ ಸಂತೋಷ ನಾಟೀಕಾರ, ವಿಠ್ಠಲ ನಾಟೀಕಾರ, ನಿಂಗಪ್ಪ ರೊಟ್ಟಿ ಎಂಬುವವರ ಮೇಲೆ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ.  ಚಿಕಿತ್ಸೆಗಾಗಿ ಅವರನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರದ ಬೃಹತ್ ಟೊಂಗೆ ಮುರಿದು ಬಿದ್ದ ಕಾರಣ ಸಂಚಾರಕ್ಕೆ ಕೆಲಕಾಲ ಅಡತಡೆಯಾಯಿತು. ನಂತರ ಗ್ರಾಮಸ್ಥರೇ ಮರ ಕತ್ತರಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಗ್ರಾಮ ಆಡಳಿತಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.