ADVERTISEMENT

ಒಂದೂವರೆ ತಾಸು ಜೋರು ಮಳೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 14:59 IST
Last Updated 24 ಮಾರ್ಚ್ 2020, 14:59 IST
ಬೆಳಗಾವಿಯ ಶಾಹೂನಗರದಲ್ಲಿ ಮಂಗಳವಾರ ಜೋರು ಮಳೆ–ಗಾಳಿಯಿಂದ ದೊಡ್ಡ ಮರ ಉರುಳಿಬಿದ್ದಿದ್ದರಿಂದ ದ್ವಿಚಕ್ರವಾಹನ ಹಾಗೂ ಕಾರು ಜಖಂಗೊಂಡಿದ್ದನ್ನು ಸ್ಥಳೀಯರು ವೀಕ್ಷಿಸಿದರು– ಪ್ರಜಾವಾಣಿ ಚಿತ್ರ
ಬೆಳಗಾವಿಯ ಶಾಹೂನಗರದಲ್ಲಿ ಮಂಗಳವಾರ ಜೋರು ಮಳೆ–ಗಾಳಿಯಿಂದ ದೊಡ್ಡ ಮರ ಉರುಳಿಬಿದ್ದಿದ್ದರಿಂದ ದ್ವಿಚಕ್ರವಾಹನ ಹಾಗೂ ಕಾರು ಜಖಂಗೊಂಡಿದ್ದನ್ನು ಸ್ಥಳೀಯರು ವೀಕ್ಷಿಸಿದರು– ಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರದಲ್ಲಿ ಮಂಗಳವಾರ ಸಂಜೆ ಒಂದೂವರೆ ತಾಸಿಗೂ ಹೆಚ್ಚು ಕಾಲ ಭಾರಿ ಗುಡುಗು–ಗಾಳಿ ಸಹಿತ ಸುರಿದ ಜೋರು ಮಳೆ, ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪೆರೆಯಿತು.

ಸಂಜೆ 4ರ ಸುಮಾರಿಗೆ ಸಾಧಾರಣ ಮಳೆ ಆರಂಭವಾಯಿತು. ಬಳಿಕ ಜೋರಾಯಿತು. ಗುಡುಗಿನ‌ ಮೊರೆತವೂ ಹೆಚ್ಚಾಗಿತ್ತು. ಕೊರೊನಾ‌ ವೈರಾಣು ಸೋಂಕು ಹರಡುವ ಭೀತಿಯ ನಡುವೆಯೂ ರಸ್ತೆಗಳಲ್ಲಿ ಓಡಾಡುತ್ತಿದ್ದವರಿಗೆ ಮಳೆ ‘ಬ್ರೇಕ್’ ಹಾಕಿತು.

ಗಾಳಿ, ಮಳೆಯ ರಭಸಕ್ಕೆ ಶಾಹೂನಗರ ಮುಖ್ಯರಸ್ತೆಯ ಮೆಡಿಕಲ್‌ ಸ್ಟೋರ್‌ ಬಳಿ ಮರದ ದೊಡ್ಡ ಕೊಂಬೆಯೊಂದು ಮುರಿದುಬಿದ್ದಿತು. ಅದೇ ಬಡಾವಣೆಯ ಮನೆಯೊಂದರ ಮುಂದಿದ್ದ ದೊಡ್ಡ ಮರ ಉರುಳಿಬಿದ್ದಿದ್ದರಿಂದ ದ್ವಿಚಕ್ರವಾಹನ ಹಾಗೂ ಕಾರು ಜಖಂಗೊಂಡಿತು. ಜನಸಂಚಾರ ಇರಲಿಲ್ಲವಾದ್ದರಿಂದ ಪ್ರಣಾಪಾಯ ಸಂಭವಿಸಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.