ADVERTISEMENT

ಮನೆ ಕುಸಿತ: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 7:11 IST
Last Updated 6 ಆಗಸ್ಟ್ 2019, 7:11 IST

ನೇಸರಗಿ: ತೀವ್ರವಾಗಿ ಸುರಿದ ಮಳೆಯಿಂದಾಗಿ ಬೈಲಹೊಂಗಲ ತಾಲ್ಲೂಕಿನ ಹೊಸಕೋಟಿ ಗ್ರಾಮದಲ್ಲಿ ಮನೆ ಕುಸಿದು, ನಾಗಪ್ಪ ಯಲ್ಲಪ್ಪ ಮಾದಾರ (35) ಮೃತರಾಗಿದ್ದಾರೆ.

ಸೋಮವಾರ ಸಂಜೆ ಮಳೆ ತೀವ್ರವಾಗಿ ಸುರಿಯುತ್ತಿತ್ತು. ಕೊಟ್ಟಿಗೆಯೊಳಗೆ ಕಟ್ಟಿದ್ದ ಎತ್ತುಗಳನ್ನು ಬಿಡಿಸಲು ಹೋಗಿದ್ದ ನಾಗಪ್ಪ ಅವರ ಮೇಲೆ ಮನೆ ಕುಸಿದುಬಿದ್ದಿತು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಅವರು ಕೊನೆಯುಸಿರೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT