ADVERTISEMENT

ಬೆಳಗಾವಿ | ಜಿಲ್ಲೆಯಾದ್ಯಂತ ಆಗಾಗ ಜೋರು ಮಳೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 11:43 IST
Last Updated 1 ಜೂನ್ 2020, 11:43 IST

ಬೆಳಗಾವಿ: ಜಿಲ್ಲೆಯಾದ್ಯಂತ ಸತತ 2ನೇ ದಿನವಾದ ಸೋಮವಾರವೂ ಆಗಾಗ ಜೋರು ಮಳೆ ಬಿದ್ದಿತು.

ಬೆಳಗಾವಿ ತಾಲ್ಲೂಕು, ಚಿಕ್ಕೋಡಿ, ರಾಯಬಾಗ, ಬೈಲಹೊಂಗಲ, ಸವದತ್ತಿ, ಗೋಕಾಕ, ಹಿರೇಬಾಗೇವಾಡಿ, ಎಂ.ಕೆ. ಹುಬ್ಬಳ್ಳಿ, ಯರಗಟ್ಟಿ, ರಾಮದುರ್ಗ, ಕೌಜಲಗಿ, ಮೂಡಲಗಿ, ಹಾರೊಗೇರಿ, ರಾಯಬಾಗ ಮೊದಲಾದ ಕಡೆಗಳಲ್ಲಿ ಉತ್ತಮ ಮಳೆ ಸುರಿಯಿತು.

ಬೈಲಹೊಂಗಲದಲ್ಲಿ ಭಾನುವಾರ ರಾತ್ರಿಯಿಡಿ ಸುರಿದ ಮಳೆ ಸೋಮವಾರವೂ ಮುಂದುವರಿಯಿತು. ಗೋಕಾಕದ ಲಕ್ಷ್ಮಿ ಬಡಾವಣೆಯ ಮುಖ್ಯ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮೇಲೆ ಮಳೆ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ADVERTISEMENT

ನಗರದಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಒಂದು ತಾಸಿಗೂ ಹೆಚ್ಚು ಸಮಯ ಭಾರಿ ಮಳೆಯಾಯಿತು. ಅಜಂನಗರ, ಶಾಹೂನಗರ, ನೆಹರೂ ನಗರ, ಸದಾಶಿವನಗರ ಮೊದಲಾದ ಕಡೆಗಳಲ್ಲಿ ಚರಂಡಿಗಳು ಉಕ್ಕಿ ಹರಿದಿದ್ದರಿಂದ ರಸ್ತೆಗಳಲ್ಲಿ ನೀರು ಸಂಗ್ರಹವಾಗಿತ್ತು. ಕಡೋಲ್ಕರ್‌ ಗಲ್ಲಿ, ಪಾಂಗುಳ ಗಲ್ಲಿ, ತಹಶೀಲ್ದಾರ್‌ ಗಲ್ಲಿ, ಭಾಂದೂರ ಗಲ್ಲಿ ಮೊದಲಾದ ಕಡೆಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದವು. ಬಳಿಕ ಆಗಾಗ ಸಾಧಾರಣ ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.