ADVERTISEMENT

ಮಡಿಕೇರಿ, ಚಿಕ್ಕಮಗಳೂರು ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 0:55 IST
Last Updated 5 ಜುಲೈ 2025, 0:55 IST
<div class="paragraphs"><p>ಕಾರವಾರ ತಾಲ್ಲೂಕಿನ ಬಾಳೆಮನೆ ಸಮೀಪ ಕದ್ರಾ–ಕೊಡಸಳ್ಳಿ ಮಾರ್ಗದ ಪಕ್ಕದ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಭವಿಸಿದ ಭೂಕುಸಿತದ ಡ್ರೋನ್ ಚಿತ್ರವನ್ನು ಉತ್ತರ ಕನ್ನಡ ಜಿಲ್ಲಾಡಳಿತ ಶುಕ್ರವಾರ ಬಿಡುಗಡೆ ಮಾಡಿದೆ</p></div>

ಕಾರವಾರ ತಾಲ್ಲೂಕಿನ ಬಾಳೆಮನೆ ಸಮೀಪ ಕದ್ರಾ–ಕೊಡಸಳ್ಳಿ ಮಾರ್ಗದ ಪಕ್ಕದ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಭವಿಸಿದ ಭೂಕುಸಿತದ ಡ್ರೋನ್ ಚಿತ್ರವನ್ನು ಉತ್ತರ ಕನ್ನಡ ಜಿಲ್ಲಾಡಳಿತ ಶುಕ್ರವಾರ ಬಿಡುಗಡೆ ಮಾಡಿದೆ

   

ಕೊಡಗು: ಜಿಲ್ಲೆಯ ಹಲವೆಡೆ ಶುಕ್ರವಾರವೂ ಧಾರಾಕಾರ ಮಳೆ ಮುಂದುವರಿಯಿತು. ಮಡಿಕೇರಿ, ನಾಪೋಕ್ಲು ಮತ್ತು ವಿರಾಜಪೇಟೆಯಲ್ಲಿ ದಿನವಿಡೀ ಮಳೆ ಸುರಿಯಿತು.

ಮಂಗಳೂರು ವರದಿ: ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಮುಂದುವರಿ
ದಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಎಡೆಬಿಡದೆ ಮಳೆ ಸುರಿದ ಕಾರಣ ಅಂಗನವಾಡಿ, ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಮಧ್ಯಾಹ್ನದ ನಂತರ ಮಳೆ ಬಿರುಸುಗೊಂಡಿತು. ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಬ್ರಹ್ಮಾವರ, ಕಾಪು ವ್ಯಾಪ್ತಿಯಲ್ಲೂ ಬಿರುಸಿನ ಮಳೆ ಸುರಿದಿದೆ. 

ADVERTISEMENT

ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಗಳೂರು, ಕಳಸ, ಎನ್.ಆರ್.ಪುರ, ಮೂಡಿಗೆರೆ, ಶೃಂಗೇರಿ, ಕೊಪ್ಪ ತಾಲ್ಲೂಕಿನ ಹಲವೆಡೆ ಮಳೆ ಸುರಿಯಿತು. ಕಳಸ ತಾಲ್ಲೂಕಿನ ಚನ್ನಹಡ್ಲು ಬಳಿ ರಸ್ತೆ ಮಣ್ಣು ಕುಸಿದು ಸಂಚಾರಕ್ಕೆ ಅಡಚಣೆಯಾಗಿತ್ತು. ಹಿರೇಬೈಲು– ಮಲ್ಲೇಶನ ಗುಡ್ಡ, ಬಾಳೆಹೊಳೆ ಸೇರಿ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿತ್ತು.

ಗಂಗಾವತಿ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯದಿಂದ ಶುಕ್ರವಾರ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಿರುವುದರಿಂದ ತಾಲ್ಲೂಕಿನ ವಿರೂಪಾಪುರಗಡ್ಡೆ, ನವವೃಂದಾವನಗಡ್ಡೆ ರಸ್ತೆ ಸಂಪರ್ಕ ಕಡಿತವಾಗಿದೆ. ಆನೆಗೊಂದಿ ಭಾಗದ ಕೆಲ ದೇವಾಲಯ, ಮಂಟಪಗಳಿಗೆ ನೀರು ನುಗ್ಗಿದೆ.  ಜಲಾಶಯದ ಒಳಹರಿವು ಹೆಚ್ಚಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಆನೆಗೊಂದಿ
ಯಲ್ಲಿರುವ ಕೃಷ್ಣದೇವರಾಯ‌ನ ಸಮಾಧಿಯ 64 ಸಾಲಿನ ಕಲ್ಲಿನ ಮಂಟಪ ಭಾಗಶಃ ಮುಳುಗಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.