ಹೈಕೋರ್ಟ್
ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ-2000 (ಫೆಮಾ) ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದಡಿ ‘ಗ್ರೀನ್ ಪೀಸ್ ಎನ್ವಿರಾನ್ಮೆಂಟ್ ಟ್ರಸ್ಟ್’ ಮತ್ತು ಸಂಬಂಧಿತ ಸಂಸ್ಥೆಯಾದ ‘ಗ್ರೀನ್ ಪೀಸ್ ಇಂಡಿಯಾ ಸೊಸೈಟಿ’ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿದ್ದ ದೂರನ್ನು ಹೈಕೋರ್ಟ್ ವಜಾಗೊಳಿಸಿದೆ.
ದೂರು ರದ್ದುಪಡಿಸುವಂತೆ ಕೋರಿ ‘ಗ್ರೀನ್ ಪೀಸ್ ಎನ್ವಿರಾನ್ಮೆಂಟ್ ಟ್ರಸ್ಟ್’ ಮತ್ತು ‘ಗ್ರೀನ್ ಪೀಸ್ ಇಂಡಿಯಾ ಸೊಸೈಟಿ’ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಜಾರಿ ಮಾಡಿದ್ದ ಷೋಕಾಸ್ ನೋಟಿಸ್ ಅನ್ನು ನ್ಯಾಯಪೀಠ ವಜಾಗೊಳಿಸಿದೆ.
‘ಗ್ರೀನ್ ಪೀಸ್ ಸಂಸ್ಥೆಯು ದೇಶದ ಅಭಿವೃದ್ಧಿ ವಿರೋಧಿ ಚಟುವಟಿಕೆಯಲ್ಲಿ ತೊಡಗಿದೆ’ ಎಂದು ಕೇಂದ್ರ ಗೃಹ ಇಲಾಖೆ ಆರೋಪಿಸಿತ್ತು. ಇದರ ಆಧಾರದಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ-2010 (ಎಫ್‌ಸಿಆರ್‌ಎ) ಪರವಾನಗಿ ರದ್ದುಪಡಿಸಲಾಗಿತ್ತು. ಈ ಬೆನ್ನಲ್ಲೇ ಗ್ರೀನ್ ಪೀಸ್ ಕಚೇರಿಯ ಮೇಲೆ ಇ.ಡಿ ದಾಳಿ ನಡೆಸಿತ್ತು.
ಗ್ರೀನ್ ಪೀಸ್ ಪರ ಹೈಕೋರ್ಟ್ ವಕೀಲೆ ಮೋನಿಕಾ ಪಾಟೀಲ್ ಮತ್ತು ಕೇಂದ್ರ ಸರ್ಕಾರದ ಪರ ಎಂ.ಉನ್ನಿಕೃಷ್ಣನ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.