ADVERTISEMENT

ಸಂಸದ ಪ್ರಜ್ವಲ್‌ ರೇವಣ್ಣಗೆ ಹೈಕೋರ್ಟ್‌ ಸಮನ್ಸ್‌

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 11:51 IST
Last Updated 26 ಜುಲೈ 2019, 11:51 IST
   

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸಮನ್ಸ್ಜಾರಿ ಮಾಡಿ ಹೈಕೋರ್ಟ್‌ ಆದೇಶಿದೆ.

‘ವಾಸ್ತವ ಆದಾಯ ಬಚ್ಚಿಟ್ಟು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಲೋಕಸಭಾ ಚುನಾವಣೆಯಲ್ಲಿ ಹಾಸನ ಸಂಸತ್‌ ಕ್ಷೇತ್ರದಿಂದ ಗೆದ್ದಿರುವ ಪ್ರಜ್ವಲ್‌ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು’ ಎಂದು ಕೋರಿಪರಾಜಿತ ಅಭ್ಯರ್ಥಿ ಎ.ಮಂಜು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

‘ಆದಾಯ ತೆರಿಗೆ ವಿವರಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ದಾಖಲೆ ಸುಳ್ಳು ಅಂಕಿ ಅಂಶಗಳಿಂದ ಕೂಡಿದೆ’ ಎಂಬುದು ಅರ್ಜಿದಾರರ ವಾದವಾಗಿತ್ತು

ADVERTISEMENT

ಇದಾದ ನಂತರ ಹಾಸನದ ವಕೀಲರೂ ಆದ ದೇವರಾಜೇಗೌಡ ಅರ್ಜಿ ಸಲ್ಲಿಸಿನಾಮಪತ್ರ ವಿವರ ಹಾಗೂ ಚುನಾವಣಾ ವೆಚ್ಚದ ದೃಢೀಕರಣ ಪ್ರತಿ ನೀಡಬೇಕೆಂದು ಕೋರಿದ್ದರು.

‘ಸಂಸದ ಪ್ರಜ್ವಲ್ ರೇವಣ್ಣ ಅವರು 2019ರ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್‌ ಅಭ್ಯರ್ಥಿಯಾಗಿ ಸಲ್ಲಿಸಿದ ನಾಮಪತ್ರ ವಿವರ ಹಾಗೂ ಚುನಾವಣಾ ವೆಚ್ಚದ ದೃಢೀಕರಣ ಪ್ರತಿಗಳನ್ನು ಇದೇ ಜುಲೈ 3ರೊಳಗೆಒದಗಿಸಬೇಕು’ ಎಂದು ಹೈಕೋರ್ಟ್, ಹಾಸನ ಜಿಲ್ಲಾಧಿಕಾರಿಗೆ ಆದೇಶಿಸಿತ್ತು.

‘ಚುನಾವಣಾ ತಕರಾರು ಅರ್ಜಿ ಸಲ್ಲಿಸಲು 45 ದಿನಗಳ ಕಾಲಾವಕಾಶ ಇರುತ್ತದೆ. ಈ ಅವಧಿ ಇದೇ 6ಕ್ಕೆ ಮುಕ್ತಾಯವಾಗಲಿದೆ. ಆದ್ದರಿಂದ ಇದೇ 3ರೊಳಗೆ ಅರ್ಜಿದಾರರಿಗೆ ವಿವರ ನೀಡಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿತ್ತು.

ಅರ್ಜಿದಾರರು ದಾಖಲೆ ಕೋರಿ ಏಪ್ರಿಲ್‌ 29ರಂದು ಸಲ್ಲಿಸಿದ್ದ ಮನವಿಗೆ ಜಿಲ್ಲಾಧಿಕಾರಿ, ‘ದಾಖಲೆಗೆಳಲ್ಲಾ ಖಜಾನೆಯ ಸುರಕ್ಷಿತ ವಶದಲ್ಲಿವೆ. ಹಾಗಾಗಿ ನೀಡಲಾಗದು‘ ಎಂದು ಉತ್ತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.