ADVERTISEMENT

ಹಿಜಾಬ್: ಅವಕಾಶ ನೀಡಿ, ಇಲ್ಲ ಟಿ.ಸಿ. ಕೊಡಿ: ವಿದ್ಯಾರ್ಥಿನಿಯರ ಪಟ್ಟು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 21:38 IST
Last Updated 19 ಫೆಬ್ರುವರಿ 2022, 21:38 IST
ಹಾಸನದ ಸರ್ಕಾರಿ ವಿಜ್ಞಾನ (ಸ್ವಾಯತ್ತ) ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಹಿಜಾಬ್‌ ಧರಿಸಿದ್ದ  ವಿದ್ಯಾರ್ಥಿನಿಯೊಬ್ಬರು ಇಸ್ರೊ ವಿಶ್ರಾಂತ ಅಧ್ಯಕ್ಷ ಎ.ಎಸ್‌.ಕಿರಣ್ ಕುಮಾರ್‌ ಅವರಿಂದ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು.
ಹಾಸನದ ಸರ್ಕಾರಿ ವಿಜ್ಞಾನ (ಸ್ವಾಯತ್ತ) ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಹಿಜಾಬ್‌ ಧರಿಸಿದ್ದ  ವಿದ್ಯಾರ್ಥಿನಿಯೊಬ್ಬರು ಇಸ್ರೊ ವಿಶ್ರಾಂತ ಅಧ್ಯಕ್ಷ ಎ.ಎಸ್‌.ಕಿರಣ್ ಕುಮಾರ್‌ ಅವರಿಂದ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು.   

ಮೈಸೂರು: ಹಿಜಾಬ್‌ ಕುರಿತು ಮೈಸೂರು ಭಾಗದಲ್ಲಿ ಶನಿವಾರವೂ ಪ್ರತಿಭಟನೆ ಮುಂದುವರಿದಿದೆ. ‘ಹಿಜಾಬ್‌ಗೆ ಅವಕಾಶ ಕೊಡಿ,ಇಲ್ಲ ಟಿ.ಸಿ ಕೊಡಿ’ ಎಂದುಹಾಸನ ಜಿಲ್ಲೆಯ ಅರಸೀಕೆರೆಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ, ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು.

ಈ ಮಧ್ಯೆ, ‘ವಿದ್ಯಾರ್ಥಿನಿಯರ ವಿರುದ್ಧ ದೂರು ನೀಡು ತ್ತೇನೆ, ಬಂಧಿಸಿ’ ಎಂದು ಶುಕ್ರ ವಾರ ಪೊಲೀಸರಿಗೆ ಹೇಳಿದ್ದ ಮಡಿಕೇರಿಯ ಜೂನಿಯರ್‌ ಕಾಲೇಜಿನ ಪ್ರಾಂಶುಪಾಲ ವಿಜಯ್‌ ಅವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ.

‘ಶುಕ್ರವಾರ ವಿದ್ಯಾರ್ಥಿನಿಯರೊಂದಿಗೆ ನಡೆಸಿದ ವಾಗ್ವಾದದ ವಿಡಿಯೋಗೆ ಪ್ರತಿಕ್ರಿಯಿಸಿರುವ ಮಹಮ್ಮದ್ ತೌಸಿಫ್ ಎಂಬಾತ ‘ನೀನು ಹೆಚ್ಚು ದಿನ ಬದು ಕುವುದಿಲ್ಲ’ ಎಂದು ಬರೆದು ಅವಾಚ್ಯ ಶಬ್ದಗಳಿಂದ ಬೆದರಿಕೆ ಒಡ್ಡಿದ್ದಾನೆ’ ಎಂದು ಅವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

‘ಹೈಕೋರ್ಟ್‌ ಆದೇಶವನ್ನು ಪಾಲಿಸಿದ್ದಕ್ಕೆ ಕೊಲೆ ಬೆದರಿಕೆ ಯೊಡ್ಡುತ್ತಾರೆ ಎಂದರೆ ಏನರ್ಥ? ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ಹಿತಾಸಕ್ತಿಯನ್ನೂ ಕಾಪಾಡಬೇಕಾಗಿದೆ. ಬೆದರಿಕೆಗಳಿಗೆ ಕಿವಿಗೊಡುವುದಿಲ್ಲ’ ಎಂದು ವಿಜಯ್‌ ತಿಳಿಸಿದ್ದಾರೆ.

‘ಸಮವಸ್ತ್ರ ಧರಿಸದಿದ್ದಲ್ಲಿ ₹ 200 ದಂಡ ಶುಲ್ಕ ವಿಧಿಸಲಾ ಗುವುದು’ ಎಂದು ಹಾಸನದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿನಿಯರಿಗೆ ಸೂಚಿಸಲಾಗಿದೆ. ಆಡಳಿತ ಮಂಡಳಿ ಸಮವಸ್ತ್ರ ಕಡ್ಡಾಯಗೊಳಿಸಿದೆ’ ಎಂದು ಪ್ರಾಂಶುಪಾಲ ಕೆ.ಟಿ.ಕೃಷ್ಣೇಗೌಡ ತಿಳಿಸಿದರು.

ಸರ್ಕಾರಿ ವಿಜ್ಞಾನ (ಸ್ವಾಯತ್ತ) ಕಾಲೇಜಿನ ಘಟಿಕೋತ್ಸವದಲ್ಲಿ ಕೆಲವರು ಹಿಜಾಬ್‌ ಧರಿಸಿಯೇ ಪದವಿ–ಪದಕ ಸ್ವೀಕರಿಸಿದರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಗೌತಮ್ ಪ್ರೌಢ ಶಾಲೆಯಲ್ಲಿ ತರಗತಿ ಮುಗಿಯು ವವ ರೆಗೂ ಇಬ್ಬರು ವಿದ್ಯಾರ್ಥಿನಿಯರು ಹೊರಗೇ ಕುಳಿತಿದ್ದರು. ಹುಣಸೂರಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಕುಳ್ಳಿರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.