ಚಿಕ್ಕಮಗಳೂರು: ‘ಶಾಸಕ ಜಿ.ಟಿ.ದೇವೇಗೌಡ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಎಲ್ಲಿಯೂ ಚರ್ಚೆ ಮಾಡಿಲ್ಲ. ಪಕ್ಷದಿಂದ ಗೆದ್ದ ಶಾಸಕ ಅವಧಿ ಮುಗಿಯುವವರೆಗೆ ಪಕ್ಷದಲ್ಲಿ ಇರುವುದು ಒಳ್ಳೆಯದು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಇಲ್ಲಿ ಭಾನುವಾರ ಪ್ರತಿಕ್ರಿಯಿಸಿದರು.
ಜಿ.ಟಿ.ದೇವೇಗೌಡ ಅವರನ್ನು ಉಚ್ಛಾಟಿಸಲು ಪಕ್ಷ ಮುಂದಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಉಚ್ಛಾಟನೆಗೆ ಈಗ ಯಾರು ಹೆದರುತ್ತಿಲ್ಲ. ಉಚ್ಛಾಟನೆ ಮಾಡಲಿ ಎಂದು ಅವರು ಕಾಯುತ್ತಿದ್ದಾರೆ. ಆಗ ಇನ್ನೂ ಹಗುರವಾಗಿ ಮಾತನಾಡಲು, ಬೇರೆ ನಡೆ ಇಡಲು ಅವಕಾಶವಾಗುತ್ತದೆ. ಅವರ ರೀತಿನೀತಿ ಗಮನಿಸಿದರೆ ಹಾಗೆ ಆನಿಸುತ್ತಿದೆ’ ಎಂದರು.
‘ಪ್ರತಿ ಸಭೆಗೂ ಅವರನ್ನು ಆಹ್ವಾನಿಸಿದ್ದೇವೆ. ಮೊನ್ನೆಯ ಸಭೆಗೂ ಅವರಿಗೆ ಕರೆ ಹೋಗಿತ್ತು. ಅವರು ಹಾಜರಾಗಿಲ್ಲ’ ಎಂದು ಉತ್ತರಿಸಿದರು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.