ಹನೂರು: ವನ್ಯಜೀವಿ ಸಂರಕ್ಷಣೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರು ಡಿ.31 ಹಾಗೂ ಜ.1ರಂದು ಹೊಗೆನಕಲ್ ಜಲಪಾತ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ.
ಕಾವೇರಿ ವನ್ಯಧಾಮದ ಗೋಪಿನಾಥಂ ವನ್ಯಜೀವಿ ವಲಯದಲ್ಲಿರುವ ಗೋಪಿನಾಥಂ ಮಿಸ್ಟ್ರೀ ಟ್ರೇಲ್ ಕ್ಯಾಂಪ್‌ನಲ್ಲಿ ವಸತಿ ಗೃಹಗಳ ಬುಕ್ಕಿಂಗ್ ವ್ಯವಸ್ಥೆಯನ್ನು 2 ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಅಹಿತಕರ ಘಟನೆಗಳು ಹಾಗೂ ವನ್ಯಪ್ರಾಣಿಗಳ ಸ್ವಚ್ಛಂದಕ್ಕೆ ಧಕ್ಕೆ ತರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಜ.2ರಿಂದ ಪ್ರವಾಸಿಗರು ಹೊಗೆನಕಲ್‌ಗೆ ಭೇಟಿ ನೀಡಬಹುದು ಎಂದು ಕಾವೇರಿ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.