ADVERTISEMENT

ಪೈರೆಸಿ ತಡೆಗೆ ಸಿಸಿಬಿ, ಸೈಬರ್ ತಂಡ: ಗೃಹ ಸಚಿವ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 8:43 IST
Last Updated 28 ಅಕ್ಟೋಬರ್ 2021, 8:43 IST
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ   

ಬೆಂಗಳೂರು: ಕರ್ನಾಟಕ‌ ಸಿನಿಮಾ ನಿಯಂತ್ರಣ ಕಾಯ್ದೆಗೆ ಪುನಃ ತಿದ್ದುಪಡಿ ತರುತ್ತಿದ್ದೇವೆ. ಮುಂಚೆ ಬಹಳ ದೊಡ್ಡ ಕೊಠಡಿ ಇರಬೇಕಿತ್ತು, ಪರಿಕರ ದೊಡ್ಡದಿಡಬೇಕಿತ್ತು.‌ ಈಗ ತಂತ್ರಜ್ಞಾನ ಬದಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜ್ಞಾನೇಂದ್ರ,ಇತ್ತೀಚಿಗಿನ ಟೆಕ್ನಾಲಜಿ ಬಂದಿದೆ ಮತ್ತು ಯಾವ ಬದಲಾವಣೆ ಅಗತ್ಯವಿದೆ ಎಂದು ಸಭೆಯಲ್ಲಿ ಚರ್ಚೆಯಾಗಿದೆ. ಬೇರೆ ಬೇರೆ ಇಲಾಖೆಯವರ ಸಲಹೆ ಪಡೆಯಲಾಗಿದೆ. ಸಿನಿಮಾ ತಯಾರಕರೊಂದಿಗೆ ಈ ಹಿಂದೆ ಸಮಾಲೋಚನೆ ಮಾಡಲಾಗಿದೆ ಎಂದರು.

ಲೈಸೆನ್ಸ್ ಫೀಸ್ ರಿಯಾಯಿತಿ, ಲೈಸೆನ್ಸ್ ಶುಲ್ಕ ಐದು ವರ್ಷಕ್ಕೊಮ್ಮೆ ನೀಡುವುದು ಸೇರಿದಂತೆ ಪೈರೆಸಿ ಪಿಡುಗು ಸಮಸ್ಯೆ ನಿವಾರಣೆಗೆ ಕ್ರಮದ ಬಗ್ಗೆ ಚರ್ಚೆ ಮಾಡಲಾಗಿದೆ. ಪೈರೆಸಿ ಕಂಡು ಹಿಡಿದು, ಆರೋಪಿಗಳನ್ನು ಹುಡುಕಿ, ಕಣ್ಣಿಡಲು ಜೈಲಿಗೆ ಹಾಕಲು ಸಿಸಿಬಿ ಮತ್ತು ಸೈಬರ್ ತಂಡದ ಜಂಟಿ ಕಾರ್ಯಾಚರಣೆ ಪಡೆ ನೇಮಕ ಮಾಡಿದ್ದು ಕಣ್ಣಿಡಲಾಗುತ್ತದೆ‌. ಶಿಕ್ಷೆ ಪ್ರಮಾಣ ಕಾಯ್ದೆಯಲ್ಲಿದೆ.
ತಯಾರಿಕರಿಗೆ ರಕ್ಷಣೆ ಕೊಡಬೇಕಿದೆ, ಲಕ್ಷಾಂತರ ಜನರಿಗೆ ಅನ್ನ ಕೊಡುವ ಉದ್ಯಮ ಅದು, ರಕ್ಷಿಸಬೇಕಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.