ADVERTISEMENT

‘ಹನಿಟ್ರ್ಯಾಪ್’; ವಿದ್ಯಾರ್ಥಿನಿ, ಕಾನ್‌ಸ್ಟೆಬಲ್ ಸೆರೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 20:07 IST
Last Updated 14 ಮಾರ್ಚ್ 2019, 20:07 IST
   

ಬೆಂಗಳೂರು: ವಿಜಯಪುರದ ಕಾನ್‌ಸ್ಟೆಬಲ್‌ ಒಬ್ಬರನ್ನು ‘ಹನಿಟ್ರ್ಯಾಪ್’ ಜಾಲದಲ್ಲಿ ಸಿಲುಕಿಸಲು ಯತ್ನಿಸಿದ ಆರೋಪದಡಿ ಬಿಎಸ್ಸಿ ವಿದ್ಯಾರ್ಥಿನಿ ಹಾಗೂ ಆಕೆಯಸ್ನೇಹಿತನನ್ನುಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಪೊಲೀಸ್ ವಸತಿ ಸಮುಚ್ಚಯವನ್ನು ದುರ್ಬಳಕೆ ಮಾಡಿಕೊಂಡ ತಪ್ಪಿಗೆ ಆ ಕಾನ್‌ಸ್ಟೆಬಲ್‌ ಕೂಡ ಕಂಬಿ ಎಣಿಸುವಂತಾಗಿದೆ.

‘ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿನಿ, ನೆರೆಮನೆಯ ಗೆಳೆಯನೊಂದಿಗೆ ಸೇರಿಕೊಂಡು ಸುಲಿಗೆಗೆ ಇಳಿದಿದ್ದಳು. ಕಾನ್‌ಸ್ಟೆಬಲ್ ಕೊಟ್ಟದೂರಿನಅನ್ವಯಅವರಿಬ್ಬರನ್ನೂಬಂಧಿಸಿದ್ದೇವೆ’ ಎಂದು ಕಾಟನ್‌ಪೇಟೆಪೊಲೀಸರುಹೇಳಿದರು.

ಆ್ಯಪ್ ಮೂಲಕ ಪರಿಚಯ: ‘2018ರ ಜುಲೈನಲ್ಲಿ ನನಗೆ ‘ಐಎಂಒ ಆ್ಯಪ್’ ಮೂಲಕ ವಿದ್ಯಾರ್ಥಿನಿಯ ಪರಿಚಯವಾಯಿತು. ಆ ನಂತರ ಇಬ್ಬರೂ ವಿಡಿಯೊ ಕರೆ ಮಾಡಿಕೊಂಡು ಗಂಟೆಗಟ್ಟಲೇ ಮಾತನಾಡುತ್ತಿದ್ದೆವು. ಸಲುಗೆಯ ಮಾತುಕತೆ ಆಕರ್ಷಣೆಗೆ ತಿರುಗಿ, ಪರಸ್ಪರ ಭೇಟಿಯಾಗಲು ನಿರ್ಧರಿಸಿದ್ದೆವು. ಅಂತೆಯೇ ನ.13ರಂದು ನಗರಕ್ಕೆ ಬಂದ ನಾನು, ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿರುವ ಸಿಎಆರ್ ಪೊಲೀಸ್ ವಸತಿ ಸಮುಚ್ಚಯದ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದೆ’ ಎಂದು ಕಾನ್‌ಸ್ಟೆಬಲ್ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಮರುದಿನ ಸ್ನೇಹಿತನ ‌ಬುಲೆಟ್ ಬೈಕ್‌ನಲ್ಲೇ ಕಾಲೇಜಿನ ಬಳಿ ತೆರಳಿ ಆಕೆಯನ್ನು ಭೇಟಿಯಾಗಿದ್ದೆ. ನಂತರ ಮೈಸೂರು ರಸ್ತೆ, ಮಾಗಡಿ ರಸ್ತೆ, ಕೆ.ಜಿ.ರಸ್ತೆ, ಮೆಜೆಸ್ಟಿಕ್‌ ಪ್ರದೇಶಗಳಲ್ಲಿ ಸುತ್ತಾಡಿದ್ದೆವು. ಇದೇ ವೇಳೆ ಕಾಲೇಜ್ ಬ್ಯಾಗ್, ಬಂಗಾರದ ಮೂಗುತಿ, ಬೆಳ್ಳಿಯ ಕಾಲ್ಗೆಜ್ಜೆ ಹಾಗೂ ಬಟ್ಟೆಗಳನ್ನೂ ಕೊಡಿಸಿದ್ದೆ. ಕೊನೆಗೆ ಬಿಡದಿಗೆ ಹೋಗಿ ಅಲ್ಲಿನ ಅರಣ್ಯ ಪ್ರದೇಶದಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದೆವು. ಸಂಜೆ ಆಕೆಯನ್ನು ಮನೆಗೆ ಡ್ರಾಪ್ ಮಾಡಿ ವಿಜಯಪುರಕ್ಕೆ ಮರಳಿದ್ದೆ.’

‘ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನ ನಡೆಯುವಾಗ ಸ್ನೇಹಿತ ಬಂದೋಬಸ್ತ್‌ ಕೆಲಸಕ್ಕೆಂದು ಬಂದಿದ್ದ. ಆತನ ಬಳಿ ಮನೆಯ ಕೀ ಪಡೆದು ಪುನಃ ನಗರಕ್ಕೆ ಬಂದಿದ್ದೆ. ಆಗ ಪರಸ್ಪರ ಒಪ್ಪಿ ವಸತಿ ಸಮುಚ್ಚಯದಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದೆವು’ ಎಂದೂ ವಿವರಿಸಿದ್ದಾರೆ.

ಗಂಡನೆಂದು ಕರೆ: ‘ನಾಲ್ಕು ದಿನಗಳ ನಂತರ ಕರೆ ಮಾಡಿದ ಸುನೀಲ್ ಅಲಿಯಾಸ್ ರಮೇಶ್ ಎಂಬಾತ, ‘ನನ್ನ ಹೆಂಡತಿಯ ಶೀಲ ಹಾಳು ಮಾಡಿದ್ದೀಯಾ. ₹ 1 ಲಕ್ಷ ಕೊಡದಿದ್ದರೆ ಪೊಲೀಸರಿಗೆ ದೂರು ಕೊಡುತ್ತೇನೆ’ ಎಂದು ಬೆದರಿಕೆ ಹಾಕಿದ. ಈ ಬಗ್ಗೆ ಮಾತನಾಡಲು ಇದೇ ಮಾರ್ಚ್ 8ರಂದು ನಗರಕ್ಕೆ ಬಂದಿದ್ದೆ.’

‘ಮೊದಲು ಕಾಲೇಜಿನ ಬಳಿ ತೆರಳಿ, ಆಕೆಯನ್ನು ಗೆಳೆಯನ ವಸತಿ ಸಮುಚ್ಚಯಕ್ಕೆ ಕರೆದೊಯ್ದೆ. ‘ನಾನು ಸುನೀಲ್‌ನನ್ನೇ ಮದುವೆ ಆಗುವುದು. ಹಣ ಕೊಡದಿದ್ದರೆ ನಾವು ದೂರು ಕೊಡುತ್ತೇವೆ’ ಎಂದು ಆಕೆಯೂಪಟ್ಟು ಹಿಡಿದಿದ್ದಳು. ನಾನು ಕೊಟ್ಟ ಎಲ್ಲ ಉಡುಗೊರೆಗಳನ್ನೂ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಗಲಾಟೆ ಪ್ರಾರಂಭಿಸಿದ ಆಕೆ, ‘ಕಾನ್‌ಸ್ಟೆಬಲ್‌ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾನೆ’ ಎಂದು ತನ್ನ ಗೆಳೆಯ ಸುನೀಲ್‌ಗೆ ಸಂದೇಶ ಕಳುಹಿಸಿ, ವಿಳಾಸವನ್ನೂ ವಾಟ್ಸ್‌ಆ್ಯಪ್‌ನಲ್ಲಿ ಷೇರ್ ಮಾಡಿದ್ದಳು. ಆತ ಪೊಲೀಸ್ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿ ದೂರು ಕೊಟ್ಟಿದ್ದ’ ಎಂದೂ ಕಾನ್‌ಸ್ಟೆಬಲ್ ವಿವರಿಸಿದ್ದಾರೆ.

ಬಯಲಾಯ್ತು ಹನಿಟ್ರ್ಯಾಪ್
ಪೊಲೀಸರು ಆ ಲೊಕೇಷನ್‌ನ ಜಾಡು ಹಿಡಿದುತನಿಖೆಪ್ರಾರಂಭಿಸಿದಾಗ ಪೊಲೀಸ್ ವಸತಿ ಸಮುಚ್ಚಯದಲ್ಲೇ ಇಬ್ಬರೂ ಸಿಕ್ಕಿಬಿದ್ದರು. ಮೊದಲು ಅತ್ಯಾಚಾರ ಯತ್ನ ಆರೋಪದಡಿ ಕಾನ್‌ಸ್ಟೆಬಲ್‌ನನ್ನು ಬಂಧಿಸಿದ ಪೊಲೀಸರು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ವಿದ್ಯಾರ್ಥಿನಿ ಸ್ನೇಹಿತನೊಂದಿಗೆ ಸೇರಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ ಸಂಗತಿಯೂ ಹೊರಬಿತ್ತು. ಹೀಗಾಗಿ, ಅವರನ್ನೂ ಬಂಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.