ADVERTISEMENT

ಹೊಸ ಆಸ್ಪತ್ರೆ ನಿರ್ಮಾಣ: ಪರವಾನಗಿ ಸರಳೀಕರಣಕ್ಕೆ ಒತ್ತು–ಡಾ.ಶರಣಪ್ರಕಾಶ್ ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 10:38 IST
Last Updated 20 ಸೆಪ್ಟೆಂಬರ್ 2025, 10:38 IST
   

ಶಿವಮೊಗ್ಗ: ‘ಹೊಸ ಆಸ್ಪತ್ರೆ ಪ್ರಾರಂಭಿಸಲು 52ಕ್ಕೂ ಹೆಚ್ಚು ಪರವಾನಗಿಗಳನ್ನು ಸರ್ಕಾರದಿಂದ ಪಡೆಯಬೇಕು ಎನ್ನುವುದು ಗಮನಕ್ಕೆ ಬಂದಿದೆ. ಇದನ್ನು ಪರಿಶೀಲಿಸಿ ಸರಳೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ತಿಳಿಸಿದರು.

ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಎಲ್‌ವೈಎಫ್) ಯಿಂದ ಇಲ್ಲಿನ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ವೈದ್ಯರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಆಸ್ಪತ್ರೆ ನಿರ್ಮಿಸಲು ಆರೋಗ್ಯ ಇಲಾಖೆಯಿಂದ ಪರವಾನಗಿ ಒದಗಿಸುತ್ತಿದ್ದು, ಇದನ್ನು ಸರಳೀಕರಣ ಮಾಡಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಸರ್ಕಾರ ಇದಕ್ಕೆ ಖಂಡಿತ ಸ್ಪಂದಿಸುತ್ತದೆ ಎಂದರು.

ADVERTISEMENT

ಪ್ರತಿಯೊಂದು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಸೇರಿದಂತೆ ಕ್ಯಾನ್ಸರ್ ಆಸ್ಪತ್ರೆ, ಭೋದನಾ ಆಸ್ಪತ್ರೆ ಮತ್ತು ತುರ್ತು ಆರೋಗ್ಯ ಘಟಕಗಳನ್ನು ಮುಂದಿನ 5 ವರ್ಷದೊಳಗೆ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.