
ಬೆಂಗಳೂರು: ಬೆಂಗಳೂರು: ಪತಿ– ಪತ್ನಿ ಪ್ರಕರಣದಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ಗಳ ಅಂತರ ಜಿಲ್ಲಾ ವರ್ಗಾವಣೆಗೆ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿ–ಐಜಿಪಿ) ಸೂಚನೆ ನೀಡಿದ್ದಾರೆ.
ಪತಿ– ಪತ್ನಿ ಒಂದೇ ಘಟಕ ಅಥವಾ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡುವಂತೆ ಅರ್ಹ ಕಾನ್‌ಸ್ಟೆಬಲ್‌ಗಳು ಮನವಿ ಸಲ್ಲಿಸಿದ್ದರು. ಭರವಸೆ ನೀಡಿದ್ದ ಸರ್ಕಾರ, ಕೊಟ್ಟ ಮಾತು ಈಡೇರಿಸಿರಲಿಲ್ಲ. ನೊಂದ ಕಾನ್‌ಸ್ಟೆಬಲ್‌ಗಳು, ದಯಾಮರಣ ಕೋರಿ ರಾಷ್ಟ್ರಪತಿಗೆ ಇತ್ತೀಚೆಗೆ ಪತ್ರ ಬರೆದಿದ್ದರು.
ಇದರ ಬೆನ್ನಲ್ಲೇ ಡಿಜಿ–ಐಜಿಪಿಗೆ ಸೋಮವಾರ ಪತ್ರ ಬರೆದಿರುವ ಗೃಹ ಸಚಿವ, ‘ಲೋಕಸಭಾ ಚುನಾವಣೆ ಸಂಹಿತೆ ಜಾರಿಯಾಗುವ ಮುನ್ನ ಅರ್ಹ ಕಾನ್‌ಸ್ಟೆಬಲ್‌ಗಳ ವರ್ಗಾವಣೆ ಪ್ರಸ್ತಾವಗಳ ಬಗ್ಗೆ ಕ್ರಮ ಕೈಗೊಂಡು ವರದಿ ನೀಡಿ’ ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.