ADVERTISEMENT

ಅನಕ್ಷರಸ್ಥ ಖೈದಿಗಳಿಗೆ ಅಕ್ಷರ ಕಲಿಕೆಗೆ ಉತ್ತೇಜನ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 9:06 IST
Last Updated 28 ಅಕ್ಟೋಬರ್ 2021, 9:06 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ನವೆಂಬರ್ ಒಂದರಿಂದ ಜೈಲಿನಲ್ಲಿರುವ ಅನಕ್ಷರಸ್ಥ ಖೈದಿಗಳಿಗೆ ಅಕ್ಷರ ಕಲಿಸುವ ಕೆಲಸ ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ವಿವಿಧ ಜೈಲುಗಳಲ್ಲಿ ಹದಿನಾರು ಸಾವಿರ ಖೈದಿಗಳಿದ್ದು, ಆರು ಸಾವಿರ ಅನಕ್ಷರಸ್ಥರಿರಬಹುದು. ಹೆಬ್ಬೆಟ್ಟು ಒತ್ತಿ ಜೈಲಿಗೆ ಬಂದವರನ್ನು ಸಹಿ ಹಾಕಿ ಹೊರಕಳಿಸಲಾಗುತ್ತದೆ. ಕಾರ್ಯಕ್ರಮ ರೂಪಿಸಲಾಗುತ್ತದೆ. ಅಕ್ಷರ ಕಲಿಸಲು ಖೈದಿಗಳನ್ನೂ ಬಳಸಿಕೊಳ್ಳಲಾಗುತ್ತದೆ. ಅವರಿಗೆ ಗೌರವ ಧನ ಕೊಡಲಾಗುತ್ತದೆ’ ಎಂದರು.

ಸದ್ಯ ಕವಾಯತು ಮಾಡುವಾಗ ಇಂಗ್ಲಿಷ್ ಕಾಶನ್ ಕೊಡುವ ಪದ್ಧತಿ ಇದೆ. ಆದರೆ, ನವೆಂಬರ್ ಒಂದರಿಂದ ಕನ್ನಡದಲ್ಲಿ ಕವಾಯತು ಮಾಡಲಾಗುತ್ತದೆ. ಈಗಾಗಲೇ ತರಬೇತಿ ಕೊಡಲಾಗುತ್ತದೆ ಎಂದು ಹೇಳಿದರು.

ADVERTISEMENT

ಬೆಳಗಾವಿಯಲ್ಲಿ ಎಂಇಎಸ್‌ ಕಾರ್ಯಕರ್ತರು ಉದ್ಧಟತನ ಮಾಡಿದರೆ ಮೊಕದ್ದಮೆ ಹೂಡುತ್ತೇವೆ ಎಂದು ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.