ADVERTISEMENT

ಜೂನ್‌ 1ರಿಂದ ರೈಲುಗಳ ಸಂಖ್ಯೆ ಹೆಚ್ಚಳ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ 

​ಪ್ರಜಾವಾಣಿ ವಾರ್ತೆ
Published 24 ಮೇ 2020, 11:18 IST
Last Updated 24 ಮೇ 2020, 11:18 IST
ಸಚಿವ ಸುರೇಶ್ ಅಂಗಡಿ
ಸಚಿವ ಸುರೇಶ್ ಅಂಗಡಿ   

ಬೆಳಗಾವಿ: ‘ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 1ರಿಂದ ಹೆಚ್ಚಿನ ರೈಲುಗಳನ್ನು ಓಡಿಸಲಾಗುವುದು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಂಬರುವ 10 ದಿನಗಳಲ್ಲಿ 2,600 ರೈಲುಗಳನ್ನು ಬಿಡಲಾಗುವುದು. ಒಟ್ಟು 36ಲಕ್ಷ ಶ್ರಮಿಕ ಸಹೋದರರನ್ನು ಅವರವರ ಸ್ಥಳಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 31 ಲಕ್ಷಕ್ಕೂ ಹೆಚ್ಚಿನ ಶ್ರಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಿದ್ದೇವೆ. ರಾಜ್ಯಗಳ ಒಳಗೆ ರೈಲು ಓಡಿಸಲು ಆಯಾ ಸರ್ಕಾರಗಳ ಸಮ್ಮತಿ ಮೇರೆಗೆ ಕ್ರಮ ವಹಿಸಲಾಗಿದೆ’ ಎಂದರು.

‘ಬೆಂಗಳೂರಿನಿಂದ ಮೈಸೂರು ಹಾಗೂ ಬೆಳಗಾವಿಗೆ ಪ್ರಾಯೋಗಿಕವಾಗಿ ಸಂಚರಿಸುತ್ತಿರುವ ರೈಲುಗಳಿಗೆ ಪ್ರಯಾಣಿಕರಿಂದ ಸದ್ಯಕ್ಕೆ ಹೆಚ್ಚಿನ ಪ್ರತಿಕ್ರಿಯೆ ಕಂಡುಬಂದಿಲ್ಲ. ಅವರಿಗೆ ಮಾಹಿತಿಯ ಕೊರತೆಯೂ ಇರಬಹುದು. ಮುಂದಿನ ದಿನಗಳಲ್ಲಿ ರೈಲುಗಳು ಕಾಯಂ ಆಗಿ ಸಂಚರಿಸುತ್ತವೆ ಎನ್ನುವುದು ಗೊತ್ತಾದರೆ ಜನರಿಂದ ಹೆಚ್ಚಿನ ಪ್ರತಿಕ್ರಿಯೆ ದೊರೆಯಲಿದೆ. ಪ್ರಯಾಣದ ಸಂದರ್ಭದಲ್ಲಿ ಅಂತರ ಕಾಪಾಡಿಕೊಳ್ಳುವುದನ್ನು ಜನರು ಮರೆಯಬಾರದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.