ಅಜಿಲಮೊಗರು ಸುದ್ದಿಯಾಗೋದು ಇಂದಿಗೂ ಉಳಿದುಕೊಂಡು ಬಂದಿರುವ ಇಲ್ಲಿನ ಸೌಹಾರ್ದತೆಯಿಂದ. ಪ್ರಮುಖವಾಗಿ ಚುನಾವಣೆಗಳ ಸಂದರ್ಭದಲ್ಲಿ ಅಥವಾ ಇನ್ನಿತರ ಸಂದರ್ಭಗಳಲ್ಲಿ ಗಲಭೆ, ಹಿಂಸಾಚಾರ, ಕೋಮುಪ್ರಚೋದಕ ಮಾತುಗಳಿಂದಲೇ ಸುದ್ದಿಯಾಗುವ ಕರಾವಳಿಯಲ್ಲಿ ಅಜಿಲಮೊಗರಿಗೆ ಕೋಮು ದ್ವೇಷದ ವಿಷ ಗಾಳಿ ಇನ್ನೂ ತಟ್ಟಿಲ್ಲ. ಊರವರು ಹೇಳುವ ಹಾಗೆ ತಟ್ಟುವುದೂ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.