ADVERTISEMENT

ಇಂಧನ ಸ್ಥಿರತೆ, ಇ–ಮೊಬಿಲಿಟಿ, ಇಂಧನ ಕ್ಷಮತೆ: ಹೊಸ ಐಡಿಯಾ ಕೊಟ್ಟರೆ ₹ 5ಲಕ್ಷ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2018, 20:16 IST
Last Updated 25 ಆಗಸ್ಟ್ 2018, 20:16 IST

ಬೆಂಗಳೂರು: ಇಂಧನ ಸ್ಥಿರತೆ, ಇ–ಮೊಬಿಲಿಟಿ, ಇಂಧನ ಕ್ಷಮತೆ, ಗ್ರಿಡ್‌ ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳ ಸವಾಲುಗಳ ಪರಿಹಾರಕ್ಕಾಗಿ ಹೊಸ ಐಡಿಯಾ ಕೊಟ್ಟರೆ ₹5 ಲಕ್ಷ ಬಹುಮಾನ ಸಿಗಲಿದೆ.

ವಿಶ್ವಬ್ಯಾಂಕ್‌, ವರ್ಲ್ಡ್‌ ರಿಸೋರ್ಸಸ್‌ ಇನ್‌ಸ್ಟಿಟ್ಯೂಟ್‌ (ಡಬ್ಲ್ಯುಆರ್‌ಐ), ಎನರ್ಜಿ ಎಫಿಶಿಯನ್ಸ್‌ ಸರ್ವಿಸಸ್‌ ಲಿಮಿಟೆಡ್‌ (ಇಇಎಸ್‌ಎಲ್‌) ಸಹಯೋಗದಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಸವಾಲಿಗೆ ಪರಿಹಾರ ಸಿಕ್ಕರೆ ಅದನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಹೆಚ್ಚಿನ ಮಾಹಿತಿಗೆ http://innovatetoinspire.in ನಲ್ಲಿ ಲಾಗಿನ್‌ ಆಗಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.