ಬೆಂಗಳೂರು: ಐಪಿಎಸ್ ಅಧಿಕಾರಿ ರೂಪ, ನಟಿಯರಾದ ತಾರಾ, ಭಾವನಾ ಅವರು ಗುರುವಾರ ಪೌರ ಕಾರ್ಮಿಕರೊಂದಿಗೆ ಸಂಕ್ರಾಂತಿ ಆಚರಿಸಿದರು.
ಪೌರ ಕಾರ್ಮಿಕರಿಗೆ ಎಳ್ಳು ಬೆಲ್ಲ ಹಂಚುವ ಮೂಲಕ ಸಂಕ್ರಾಂತಿ ಹಬ್ಬ ಆಚರಿಸಿದರು. ಇದೇ ವೇಳೆ ಗೋ ಪೂಜೆ ಮಾಡಿ ಸ್ಥಳೀಯರಿಗೆ ಪ್ರಸಾದ ವಿತರಿಸಿದರು.
ನಟಿ ತಾರಾ,ಭಾವನಾ ಬಿಜೆಪಿಯಲ್ಲಿಇದ್ದಾರೆ. ಇನ್ನು ರೂಪ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಹಬ್ಬದ ಸಂಭ್ರಮದ ಚಿತ್ರವನ್ನು ರೂಪ ಅವರು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.