ADVERTISEMENT

29 ಐಎಎಸ್‌, ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಅಲೋಕ್ ಕುಮಾರ್ ಬೆಂಗಳೂರು ನಗರ ಪೊಲೀಸ್ ಕಮಿಷನರ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 20:00 IST
Last Updated 17 ಜೂನ್ 2019, 20:00 IST
   

ಬೆಂಗಳೂರು: ಮೂವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸೇರಿ 10 ಐಎಎಸ್‌, 19 ಐಪಿಎಸ್‌ ಸೇರಿ ಒಟ್ಟು 29 ಮಂದಿ ಹಿರಿಯ ಅಧಿಕಾರಿಗಳ ವರ್ಗಾವಣೆ ಆಗಿದೆ.

ಹೆಚ್ಚುವರಿ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್‌ ಅವರನ್ನು ಇಂಧನ ಇಲಾಖೆಯಿಂದ ಎತ್ತಂಗಡಿ ಮಾಡಿದ್ದು, ಹೊಸ ಹುದ್ದೆಯನ್ನು ತೋರಿಸಿಲ್ಲ. ಮತ್ತೊಬ್ಬಹೆಚ್ಚುವರಿ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್‌ ಅವರನ್ನು ನಗರಾಭಿವೃದ್ಧಿ ಇಲಾಖೆಯಿಂದ ಇಂಧನ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಜವಾಬ್ದಾರಿಯನ್ನೂ ನೀಡಲಾಗಿದೆ.

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್, ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಸೇರಿದಂತೆ 19 ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಗೃಹ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ.

ADVERTISEMENT

ಐಎಎಸ್‌ ವರ್ಗಾವಣೆ: ಬಿ.ಎಚ್‌.ಅನಿಲ್‌ ಕುಮಾರ್‌– ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಮತ್ತು ಆಹಾರ ನಾಗರೀಕ ಪೂರೈಕೆ ಇಲಾಖೆ; ರಾಕೇಶ್‌ ಸಿಂಗ್‌– ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ; ಡಾ.ಎನ್‌.ಮಂಜುಳಾ– ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಕಾಲೇಜು ಶಿಕ್ಷಣ ಆಯುಕ್ತರಾಗಿಯೂ ಮುಂದುವರಿಯುತ್ತಾರೆ); ಪ್ರಿಯಾಂಕ ಮೇರಿ ಫ್ರಾನ್ಸಿಸ್‌– ನಿರ್ದೇಶಕರು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ; ಎಸ್‌.ಎಸ್‌.ನಕುಲ್‌– ಜಿಲ್ಲಾಧಿಕಾರಿ, ಬಳ್ಳಾರಿ; ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌– ಆಯುಕ್ತರು, ಉದ್ಯೋಗ ಮತ್ತು ತರಬೇತಿ; ಜಿ.ಸಿ.ವೃಷಭೇಂದ್ರ ಮೂರ್ತಿ– ನಿರ್ದೇಶಕರು, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ);ಕೆ.ಯಾಲಕ್ಕಿಗೌಡ– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ, ಮಂಡ್ಯ.

ಐಪಿಎಸ್‌ ಅಧಿಕಾರಿಗಳು:ಟಿ.ಸುನಿಲ್ ಕುಮಾರ್– ಎಡಿಜಿಪಿ, ನೇಮಕಾತಿ ವಿಭಾಗ; ಅಲೋಕ್ ಕುಮಾರ್– ಬೆಂಗಳೂರು ನಗರ ಪೊಲೀಸ್ ಕಮಿಷನರ್ (ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ); ಅಮೃತ್ ಪೌಲ್– ಐಜಿಪಿ, ಪೂರ್ವ ವಲಯ, ದಾವಣಗೆರೆ; ಉಮೇಶ್ ಕುಮಾರ್– ಹೆಚ್ಚುವರಿ ಪೊಲೀಸ್ ಕಮಿಷನರ್ (ಪಶ್ಚಿಮ), ಬೆಂಗಳೂರು; ಬಿ.ಕೆ.ಸಿಂಗ್– ಕಾರ್ಯದರ್ಶಿ, ಗೃಹ ಇಲಾಖೆ; ಸೌಮೇಂದು ಮುಖರ್ಜಿ– ಐಜಿಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು; ರಾಘವೇಂದ್ರ ಸುಹಾಸ– ಐಜಿಪಿ, ದಕ್ಷಿಣ ವಲಯ, ಮೈಸೂರು; ಬಿ.ಆರ್.ರವಿಕಾಂತೇಗೌಡ– ಹೆಚ್ಚುವರಿ ಪೊಲೀಸ್ ಕಮಿಷನರ್, ಅಪರಾಧ ವಿಭಾಗ, ಬೆಂಗಳೂರು.

ಅಮಿತ್ ಸಿಂಗ್– ಕಮಾಂಡೆಂಟ್, ಗೃಹ ರಕ್ಷಕ ದಳ, ಬೆಂಗಳೂರು; ರಾಮ್ ನಿವಾಸ್ ಸೆಪಟ್– ಎಸ್‌ಪಿ, ಎಸಿಬಿ, ಬೆಂಗಳೂರು; ಎಂ.ಎನ್.ಅನುಚೇತ್– ಎಸ್‌ಪಿ, ರೈಲ್ವೆ, ಬೆಂಗಳೂರು; ಬಿ.ರಮೇಶ್– ಡಿಸಿಪಿ (ಪಶ್ಚಿಮ), ಬೆಂಗಳೂರು; ರವಿ ಡಿ.ಚನ್ನಣ್ಣನವರ್– ಎಸ್‌ಪಿ, ಸಿಐಡಿ, ಬೆಂಗಳೂರು; ಭೀಮಾಶಂಕರ್ ಗುಳೇದ್– ಡಿಸಿಪಿ (ಈಶಾನ್ಯ), ಬೆಂಗಳೂರು; ಸಿ.ಬಿ.ರಿಷ್ಯಂತ್– ಎಸ್‌ಪಿ, ಮೈಸೂರು; ಮೊಹಮ್ಮದ್ ಸುಜೀತ– ಎಸ್‌ಪಿ, ಕೆಜಿಎಫ್; ಟಿ.ಪಿ.ಶಿವಕುಮಾರ್, ಎಸ್‌ಪಿ, ಬೆಂಗಳೂರು ಗ್ರಾಮಾಂತರ; ಎನ್.ವಿಷ್ಣುವರ್ಧನ, ಡಿಸಿಪಿ (ಆಡಳಿತ), ಬೆಂಗಳೂರು; ಕಲಾ ಕೃಷ್ಣಸ್ವಾಮಿ, ನಿರ್ದೇಶಕಿ, ಅರಣ್ಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.