ADVERTISEMENT

ಗ್ರಾಹಕರ ದತ್ತಾಂಶ ನಗದೀಕರಣ: ಟೆಂಡರ್ ಹಿಂಪಡೆದ ಐಆರ್‌ಸಿಟಿಸಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 16:24 IST
Last Updated 26 ಆಗಸ್ಟ್ 2022, 16:24 IST
ಐಆರ್‌ಸಿಟಿಸಿ
ಐಆರ್‌ಸಿಟಿಸಿ   

ನವದೆಹಲಿ: ಗ್ರಾಹಕರ ದತ್ತಾಂಶದ ನಗದೀಕರಣಕ್ಕಾಗಿ ಕರೆದಿದ್ದ ಟೆಂಡರ್‌ ಅನ್ನು ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಹಿಂಪಡೆದಿದೆ.

ಗ್ರಾಹಕರ ದತ್ತಾಂಶದ ಸುರಕ್ಷತೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ಐಆರ್‌ಸಿಟಿಸಿ ಈ ಕ್ರಮ ಕೈಗೊಂಡಿದೆ.

ಕೇಂದ್ರ ಸರ್ಕಾರವು ‘ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆ–2018’ ಅನ್ನು ಹಿಂಪಡೆದಿದೆ. ಈ ಕಾರಣಕ್ಕೆ ಗ್ರಾಹಕರ ದತ್ತಾಂಶ ನಗದೀಕರಣಕ್ಕಾಗಿ ಕರೆದಿದ್ದ ಟೆಂಡರನ್ನು ಹಿಂಪಡೆಯಲಾಗಿದೆ ಎಂದು ಐಆರ್‌ಸಿಟಿಸಿಯು ಷೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ.

ADVERTISEMENT

ಪ್ರಯಾಣಿಕರು, ಪ್ರಯಾಣದ ದರ್ಜೆ, ಪಾವತಿ ವಿಧಾನ, ಸರಕು ಸೇವೆಗಳು ಮತ್ತು ವ್ಯಾಪಾರ ಮಾದರಿ ಗುರುತಿಸುವಿಕೆ,ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ಲಿಂಗ, ವಿಳಾಸ, ಇಮೇಲ್-ಐಡಿ, ಪಾಸ್‌ವರ್ಡ್‌ ಸೇರಿದಂತೆ ಗ್ರಾಹಕರ ದತ್ತಾಂಶದ ನಗದೀಕರಣಕ್ಕೆ ಸಲಹೆ ನೀಡಲು ಕನ್ಸಲ್ಟಂಟ್‌ ನೇಮಕಕ್ಕಾಗಿ ಜುಲೈ 29 ರಂದು ಐಆರ್‌ಸಿಟಿಸಿ ಇ-ಟೆಂಡರ್ ಕರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.