ADVERTISEMENT

ಇಸ್ರೇಲ್‌ ಸಮಗ್ರ ಕೃಷಿ ಮಿಷನ್‌ಗೆ ಸಿಸಿಎಫ್‌ ಮನೋಜ್‌ ನೇಮಕ

​ಪ್ರಜಾವಾಣಿ ವಾರ್ತೆ
Published 21 ಮೇ 2019, 16:28 IST
Last Updated 21 ಮೇ 2019, 16:28 IST

ಬೆಂಗಳೂರು: ಇಸ್ರೇಲ್‌ ತಂತ್ರಜ್ಞಾನ ಆಧಾರಿತ ಸಮಗ್ರ ಕೃಷಿ ಮಿಷನ್‌ನ ನಿರ್ದೇಶಕರಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಬಜೆಟ್‌ ಮತ್ತು ಲೆಕ್ಕಪತ್ರ) ಮನೋಜ್‌ ರಾಜನ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

ಮನೋಜ್‌ ಅವರು ರಾಷ್ಟ್ರೀಯ ಇ–ಮಾರ್ಕೆಟ್‌ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಹೆಚ್ಚುವರಿ ಹೊಣೆಗಾರಿಕೆ ಹೊಂದಿದ್ದು, ಅದು ಮುಂದುವರಿಯಲಿದೆ.

ಮಿಷನ್‌ಗೆ ಚಾಲನೆ: ನೀರೇ ಇಲ್ಲದ ಇಸ್ರೇಲ್‌ನಲ್ಲಿ ಅತ್ಯಂತ ಕಡಿಮೆ ನೀರು ಬಳಸಿಕೊಂಡು ಉತ್ತಮ ಕೃಷಿ ಇಳುವರಿ ಪಡೆಯಲಾಗುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಯೋಜನೆ ರೂಪಿಸುವ ನಿಟ್ಟಿನಲ್ಲಿ ಈ ಮಿಷನ್‌ ಸ್ಥಾಪಿಸಲಾಗಿದೆ.

ADVERTISEMENT

ರಾಜ್ಯದ ಎಂಟು ಜಿಲ್ಲೆಗಳನ್ನು ಈ ಯೋಜನೆಗೆ ಗುರುತಿಸಲಾಗಿದೆ.ಪ್ರತಿ ಜಿಲ್ಲೆಯ ತಲಾ 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಇಸ್ರೇಲ್‌ ಮಾದರಿ ಕೃಷಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ 2 ಎಕರೆಗಿಂತ ಕಡಿಮೆ ಇರುವ ರೈತರಿಗೆ ಸಬ್ಸಿಡಿ ಸಹಿತ ಕೃಷಿಗೆ ಪೂರಕ ವ್ಯವಸ್ಥೆ ಮಾಡಿಕೊಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.