ADVERTISEMENT

96 ಸಾಧಕರು, ತಂಡಗಳಿಗೆ ಇಸ್ರೊ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 19:39 IST
Last Updated 13 ಮಾರ್ಚ್ 2019, 19:39 IST
ಇಸ್ರೊ ಪ್ರಶಸ್ತಿ ಪುರಸ್ಕೃತರೊಂದಿಗೆ ಡಾ.ಎ.ಎಸ್‌. ಕಿರಣ್‌ಕುಮಾರ್‌, ಡಾ.ಕೆ.ಕಸ್ತೂರಿ ರಂಗನ್‌, ಡಾ.ಕೆ.ಶಿವನ್‌ ಇದ್ದಾರೆ.
ಇಸ್ರೊ ಪ್ರಶಸ್ತಿ ಪುರಸ್ಕೃತರೊಂದಿಗೆ ಡಾ.ಎ.ಎಸ್‌. ಕಿರಣ್‌ಕುಮಾರ್‌, ಡಾ.ಕೆ.ಕಸ್ತೂರಿ ರಂಗನ್‌, ಡಾ.ಕೆ.ಶಿವನ್‌ ಇದ್ದಾರೆ.   

ಬೆಂಗಳೂರು: ಇಸ್ರೊದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗಾಗಿ ಶ್ರಮಿಸಿದ 96 ವ್ಯಕ್ತಿಗಳು ಮತ್ತು ತಂಡಗಳಿಗೆ ಇಸ್ರೊ ಅಂತರಿಕ್ಷ ಭವನದಲ್ಲಿ ಬುಧವಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ಹಲವು ವಿಜ್ಞಾನಿಗಳು ಮತ್ತು ತಂಡಗಳು ಸಂಸ್ಥೆಯ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಯಶಸ್ಸಿಗಾಗಿ ಶ್ರಮಿಸಿದ್ದಾರೆ. ಆದ್ದರಿಂದ ಇವರಿಗೆ ‘ಇಸ್ರೊ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರತಿಷ್ಠಿತ ಎನಿಸಿದೆ’ ಎಂದು ಇಸ್ರೊ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್‌ ತಿಳಿಸಿದರು.

‘ಏಕ ಮನಸ್ಸು, ಶ್ರದ್ಧೆಯಿಂದ ಸವಾಲುಗಳನ್ನು ತೆಗೆದುಕೊಂಡು ಗುರಿ ಸಾಧಿಸಬೇಕು. ನಿಮ್ಮೆಲ್ಲರ ಸಾಧನೆಯಿಂದಾಗಿಯೇ ಸಂಸ್ಥೆ ಎತ್ತರಕ್ಕೆ ಬೆಳೆದಿದೆ’ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್‌ ಹೇಳಿದರು.

ADVERTISEMENT

ಈ ವರ್ಷ ಯುವ ವಿಜ್ಞಾನಿ ವಿಭಾಗದ ಪ್ರಶಸ್ತಿ ವಿಭಾಗದಲ್ಲಿ 50, ಮೆರಿಟ್‌ ಪ್ರಶಸ್ತಿ ವಿಭಾಗದಲ್ಲಿ 20, ನಿರ್ವಹಣಾ ಶ್ರೇಷ್ಠತೆ ಪ್ರಶಸ್ತಿ ವಿಭಾಗದಲ್ಲಿ 10 ಮತ್ತು ತಂಡ ಶ್ರೇಷ್ಠತೆ ವಿಭಾಗದಲ್ಲಿ 16 ಜನರಿಗೆ ಪ್ರಶಸ್ತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.