ADVERTISEMENT

ಜೈನರು ಹಿಂದೂಗಳೆಂದು ಬರೆಯಿಸಬೇಡಿ: ಕರ್ನಾಟಕ ಜೈನ ಅಸೋಸಿಯೇಷನ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 19:30 IST
Last Updated 20 ಸೆಪ್ಟೆಂಬರ್ 2025, 19:30 IST
<div class="paragraphs"><p>ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ–ಪ್ರಾತಿನಿಧಿಕ ಚಿತ್ರ</p></div>

ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ–ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ‘ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ವೇಳೆ ಜೈನರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಯಿಸಬಾರದು. ಬದಲಿಗೆ ‘ಜೈನ’ ಎಂದೇ ಬರೆಯಿಸಬೇಕು’ ಎಂದು ಕರ್ನಾಟಕ ಜೈನ ಅಸೋಸಿಯೇಷನ್‌ ಕರೆ ನೀಡಿದೆ.

‘ಸಮೀಕ್ಷೆ ವೇಳೆ ಸಮುದಾಯದ ಎಲ್ಲರೂ ಧರ್ಮದ ಕಾಲಂನಲ್ಲಿ ‘ಜೈನ’, ಜಾತಿಯ ಕಾಲಂನಲ್ಲಿ ‘ಜೈನ’, ಉಪಜಾತಿಯ ಕಾಲಂನಲ್ಲಿ ‘ಜೈನ ದಿಗಂಬರ’ ಅಥವಾ ಇತರ 32 ಉಪಜಾತಿಗಳನ್ನು ಬರೆಯಿಸಬೇಕು’ ಎಂದು ಕೋರಿದೆ. ‘ಜೈನ ಎಂದೇ ಬರೆಯಿಸುವುದರಿಂದ ರಾಜ್ಯದಲ್ಲಿರುವ ಸಮುದಾಯದ ಜನರ ಸಂಖ್ಯೆ ನಿಖರವಾಗಿ ಗೊತ್ತಾಗಲಿದೆ’ ಎಂದು ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.