ADVERTISEMENT

ಹುಬ್ಬಳ್ಳಿ ಜನ ಶತಾಬ್ಧಿ: ವೇಳೆ ಬದಲು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 19:46 IST
Last Updated 17 ಆಗಸ್ಟ್ 2019, 19:46 IST
   

ಹುಬ್ಬಳ್ಳಿ: ಬೆಂಗಳೂರು ಮತ್ತು ಹುಬ್ಬಳ್ಳಿ ಮಧ್ಯೆ ನಿತ್ಯ ಸಂಚರಿಸುವ ಜನ ಶತಾಬ್ಧಿ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಭಾನುವಾರದಿಂದ (ಆ.18) ಬದಲಾಗಿದೆ.

ಹುಬ್ಬಳ್ಳಿಯಿಂದ ನಿತ್ಯ ಮಧ್ಯಾಹ್ನ 2 ಗಂಟೆಗೆ ಹೊರಟು ರಾತ್ರಿ 9.25ಕ್ಕೆ ಬೆಂಗಳೂರು ತಲುಪುತ್ತಿದ್ದ ರೈಲು, ಇನ್ನು ಮುಂದೆ ಮಧ್ಯಾಹ್ನ 2.20ಕ್ಕೆ (20 ನಿಮಿಷ ತಡವಾಗಿ) ಹೊರಟು ರಾತ್ರಿ 9.50ಕ್ಕೆ ಬೆಂಗಳೂರು ಸೇರಲಿದೆ. ಅದೇ ರೀತಿ, ಬೆಂಗಳೂರಿನಿಂದ ನಿಗದಿತ ಸಮಯ ಬೆಳಿಗ್ಗೆ 6ಕ್ಕೆ ಹೊರಟು, ಮಧ್ಯಾಹ್ನ 1.45ಕ್ಕೆ (20 ನಿಮಿಷ ತಡ) ಹುಬ್ಬಳ್ಳಿ ತಲುಪಲಿದೆ. ಹಾವೇರಿವರೆಗೆ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಹುಬ್ಬಳ್ಳಿಯಿಂದ ಹೊರಡುವ ರೈಲು ಹಾವೇರಿಗೆ ಮಧ್ಯಾಹ್ನ 3.23ಕ್ಕೆ, ರಾಣೆಬೆನ್ನೂರಿಗೆ 3.48ಕ್ಕೆ, ಹರಿಹರಕ್ಕೆ ಸಂಜೆ 4.10ಕ್ಕೆ, ದಾವಣಗೆರೆಗೆ 4.28ಕ್ಕೆ, ಚಿಕ್ಕಜಾಜೂರಿಗೆ 5.4ಕ್ಕೆ, ಬೀರೂರಿಗೆ 5.58ಕ್ಕೆ, ಅರಸೀಕೆರೆಗೆ 6.40ಕ್ಕೆ, ತುಮಕೂರಿಗೆ ರಾತ್ರಿ 8.18ಕ್ಕೆ ಹಾಗೂ ಯಶವಂತಪುರಕ್ಕೆ 9.20ಕ್ಕೆ ಬರಲಿದೆ‌ ಎಂದು ನೈರುತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.

ADVERTISEMENT

ಸೂಪರ್ ಫಾಸ್ಟ್ ರೈಲು ಕಾಯಂ: ಬೆಂಗಳೂರು– ಬೆಳಗಾವಿ ನಡುವೆ ಸಂಚರಿಸುತ್ತಿರುವ ತತ್ಕಾಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ 1ರಿಂದ ಕಾಯಂ ಆಗಿ ನಿತ್ಯ ಸಂಚರಿಸಲಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಈ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಜೂನ್ 29ರಂದು ಚಾಲನೆ ನೀಡಿದ್ದರು.

ನ.1ರಿಂದ ರಾತ್ರಿ 9ಕ್ಕೆ ಬೆಳಗಾವಿಯಿಂದ ಹೊರಡುವ ಈ ರೈಲು, ಮಾರನೇಯ ದಿನ ಬೆಳಿಗ್ಗೆ 7ಕ್ಕೆ ಬೆಂಗಳೂರು ತಲುಪಲಿದೆ. ಅದೇ ರೀತಿ ಬೆಂಗಳೂರಿನಿಂದಲೂ ರಾತ್ರಿ 9ಕ್ಕೆ ಹೊರಟು ಮಾರನೇ ದಿನ ಬೆಳಿಗ್ಗೆ 7ಕ್ಕೆ ಬೆಳಗಾವಿ ಸೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.