ADVERTISEMENT

#Metoo ಅಭಿಯಾನ ಹೆಣ್ಣು ಮಕ್ಕಳ ಮಾನ ಹರಾಜು ಹಾಕದಿರಲಿ: ಸಚಿವೆ ಜಯಮಾಲ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 11:18 IST
Last Updated 25 ಅಕ್ಟೋಬರ್ 2018, 11:18 IST
   

ಬೈಂದೂರು: ‘ಮಿಟೂ’ ಅಭಿಯಾನದ ಮೂಲಕ ಹೆಣ್ಣು ದೌರ್ಜನ್ಯವನ್ನು ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತಿದೆ. ಈ ಅಭಿಯಾನದಿಂದ ಮಹಿಳೆಯರಿಗೆ ಬಲ ಬಂದಿದೆ. ಆದರೆ, ಅಭಿಯಾನಕ್ಕೆ ಕಾನೂನಿನ ಬೆಂಬಲ ಸಿಗುವವರೆಗೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಅಭಿಪ್ರಾಯಪಟ್ಟರು.

ಬೈಂದೂರು ಕ್ಷೇತ್ರದ ನಾಗೂರಿನಲ್ಲಿ ಗುರುವಾರ ಲೋಕಸಭಾ ಉಪ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ‘ಆಧಾರರಹಿತ ಆರಿಕೆ ಮಾತುಗಳನ್ನು ಮಾಧ್ಯಮಗಳ ಮುಂದೆ ನೀಡುವುದು ಸರಿಯಲ್ಲ. ಅರ್ಜುನ್‌ ಸರ್ಜಾ ಅವರು ಸಜ್ಜನ ನಟ’ ಎಂದು ಸಚಿವೆ ಸಮರ್ಥಿಸಿಕೊಂಡರು.

ಮೀಟೂ ಅನುಭವ ನಿಮ್ಮ ವೃತ್ತಿ ಜೀವನದಲ್ಲಿ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನಮ್ಮದು ಸುವರ್ಣಯುಗ. ರಾಜಕುಮಾರ್ ಅವರಂಥವರಿದ್ದ ಕಾಲ ಅದು. 75 ಚಿತ್ರಗಳಲ್ಲಿ ನಟಿಸಿದ್ದೇನೆ; 5 ಚಿತ್ರಗಳನ್ನು ತಯಾರಿಸಿದ್ದೇನೆ. ಅಂತಹ ಯಾವ ಅನುಭವವೂ ನನಗೆ ಆಗಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.