ADVERTISEMENT

ಬಿಜೆಪಿಯವರೊಂದಿಗೆ ಕಾಣಿಸಿಕೊಂಡ ಜೆಡಿಎಸ್ ಶಾಸಕ ಜಿ.ಟಿ.‌ ದೇವೇಗೌಡ!

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 13:13 IST
Last Updated 20 ಜೂನ್ 2022, 13:13 IST
   

ಮೈಸೂರು: ಜೆಡಿಎಸ್ ಶಾಸಕ ಜಿ.ಟಿ.‌ ದೇವೇಗೌಡ ಇಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

ಕ್ರಾಫರ್ಡ್ ಹಾಲ್ ಎದುರಿನ ಓವಲ್ ಗ್ರೌಂಡ್‌ಗೆ ಸೋಮವಾರ ಸಂಜೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ನಾಯಕರ ಜೊತೆಗೂಡಿ ಬರಮಾಡಿಕೊಂಡರು. ಜೆಡಿಎಸ್‌‌ನಿಂದ ಅಂತರ ಕಾಯ್ದುಕೊಂಡಿರುವ ಅವರು ಬಿಜೆಪಿ ನಾಯಕರ ಜೊತೆ ಸಖ್ಯ ಬೆಳೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಚಿವರಾದ ಡಾ‌.ಕೆ. ಸುಧಾಕರ್, ಕೆ. ಗೋಪಾಲಯ್ಯ, ನಾರಾಯಣಗೌಡ,ಸಂಸದ ಪ್ರತಾಪ ಸಿಂಹ, ಶಾಸಕ ಎಲ್. ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ ಮೊದಲಾದವರೊಂದಿಗೆ ಪ್ರಧಾನಿಯನ್ನು ಸ್ವಾಗತಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.