ADVERTISEMENT

ಜೆಇಇ: ಶಶಾಂಕ್‌ಗೆ 2ನೇ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2023, 16:13 IST
Last Updated 29 ಏಪ್ರಿಲ್ 2023, 16:13 IST
ಶಶಾಂಕ್‌
ಶಶಾಂಕ್‌   

ಬೆಂಗಳೂರು: ದೇಶದಾದ್ಯಂತ ನಡೆದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ರಾಜ್ಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ನಗರದ ಎಚ್‌ಎಸ್ಆರ್ ಲೇಔಟ್‌ನ ನಾರಾಯಣ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಶಶಾಂಕ್ ಎರಡನೇ ರ‍್ಯಾಂಕ್‌ ಗಳಿಸಿದ್ದಾರೆ. ಜತೆಗೆ, ಸೂರಜ್ ಗುರುನಾಥ್ 7ನೇ ರ‍್ಯಾಂಕ್‌, ವೆಂಕಟ್ ಪ್ರಣಯ್ 71ನೇ ರ‍್ಯಾಂಕ್‌, ಅಚಿಂತ್ಯ ಮಥುರ 85ನೇ ರ‍್ಯಾಂಕ್‌ ಪಡೆದಿದ್ದಾರೆ.

ಐಐಟಿ ಸೇರಿದಂತೆ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಈ ಪರೀಕ್ಷೆ ನಡೆಸಿತ್ತು.

ADVERTISEMENT

ಚೈತನ್ಯ ವಿದ್ಯಾರ್ಥಿಗಳ ಸಾಧನೆ: ನಗರದ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ರಾಷ್ಟ್ರಮಟ್ಟದಲ್ಲಿ 51 ರ‍್ಯಾಂಕ್‌ಗಳನ್ನು ಈ ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿದ್ದಾರೆ. ಒಂಬತ್ತು ವಿದ್ಯಾರ್ಥಿಗಳು 100 ಪರ್ಸೆಂಟೈಲ್‌ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.