ಬೆಂಗಳೂರು: ಹಿರಿಯ ಗಾಂಧಿವಾದಿ ಜೀರಿಗೆ ಲೋಕೇಶ್ ಅವರು ಬೆಂಗಳೂರು ಗಾಂಧೀ ಶಾಂತಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಅವರು 2020 ರಿಂದ 2023ರವರೆಗೆ ಈ ಹುದ್ದೆಯಲ್ಲಿ ಇರಲಿದ್ದಾರೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ ಅವರು ಗೌರವ ಉಪಾಧ್ಯಕ್ಷ, ಕವಿ ಹಾಗೂ ಸಂಶೋಧಕ ಸತ್ಯಮಂಗಲ ಮಹಾದೇವ ಅವರು ಗೌರವ ಕಾರ್ಯದರ್ಶಿ ಹಾಗೂ ಎಸ್.ರಾಮಲಿಂಗೇಶ್ವರ ಅವರು ಗೌರವ ಖಜಾಂಚಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ನಾಡೋಜ ವೂಡೇ ಪಿ.ಕೃಷ್ಣ ಮತ್ತು ಚಂದ್ರಿಕಾ ಪುರಾಣಿಕ್ ಅವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.