ADVERTISEMENT

ಕಲಬುರಗಿ–ಬೆಂಗಳೂರು: ಹಗಲಿನಲ್ಲಿ ರಾಜಹಂಸ ಬಸ್‌ ಸೇವೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 13:34 IST
Last Updated 9 ಜೂನ್ 2022, 13:34 IST
ರಾಜಹಂಸ
ರಾಜಹಂಸ   

ಕಲಬುರಗಿ: ‘ಪ್ರಯಾಣಿಕರ ಬೇಡಿಕೆ ಮೇರೆಗೆ ಕಲಬುರಗಿ ಮತ್ತು ಬೆಂಗಳೂರು ನಡುವೆ ಹಗಲು ಪ್ರಯಾಣಕ್ಕೆ ಜೂನ್‌ 9ರಿಂದ ನೂತನ ರಾಜಹಂಸ ಬಸ್‌ ಸೇವೆ ಆರಂಭವಾಗಲಿದೆ’ ಎಂದು ಕಲಬುರಗಿ ವಿಭಾಗ–1ರ ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲ ಕುಮಾರ ಚಂದರಗಿ ತಿಳಿಸಿದ್ದಾರೆ.

ಎರಡೂ ಕಡೆಯಿಂದಲೂ ಏಕಕಾಲಕ್ಕೆ ಬಸ್‌ ಸಂಚರಿಸಲಿವೆ. ಕಲಬುರಗಿಯಿಂದ ಬೆಳಿಗ್ಗೆ 6ಕ್ಕೆ ಹೊರಟು ಸಂಜೆ 7.10ಕ್ಕೆ ಬೆಂಗಳೂರು ತಲುಪುವುದು. ಅದೇ ಬಸ್ ಮರುದಿನ ಬೆಂಗಳೂರಿನಿಂದ ಬೆಳಿಗ್ಗೆ 6ಕ್ಕೆ ಹೊರಟು ಸಂಜೆ 7.10ಕ್ಕೆ ಕಲಬುರಗಿಗೆ ಬರಲಿದೆ.

ಯಾದಗಿರಿ ಜಿಲ್ಲೆಯ ಶಹಾಪುರ–ಬೆಂಗಳೂರು ಮಧ್ಯೆ ಸಂಚರಿಸುವ ಬಸ್ ಶಹಾಪುರದಿಂದ ಬೆಳಿಗ್ಗೆ 7.40ಕ್ಕೆ ಹೊರಟು ಸಂಜೆ 7.10ಕ್ಕೆ ಬೆಂಗಳೂರಿಗೆ ತಲುಪುವುದು. ಅದೇ ಬಸ್ ಮರುದಿನ ಬೆಂಗಳೂರಿನಿಂದ ಬೆಳಿಗ್ಗೆ 6ಕ್ಕೆ ಹೊರಟು ಸಂಜೆ 5.35ಕ್ಕೆ ಶಹಾಪುರಕ್ಕೆ ಬರುತ್ತದೆ.

ADVERTISEMENT

ಬಳ್ಳಾರಿ–ಕಲಬುರಗಿ ಮಧ್ಯೆ ಸಂಚರಿಸುವ ಬಸ್ ಬಳ್ಳಾರಿಯಿಂದ ಮಧ್ಯಾಹ್ನ 12.30ಕ್ಕೆ ಹೊರಟು ಸಂಜೆ 7.10ಕ್ಕೆ ಕಲಬುರಗಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.