ADVERTISEMENT

‘ಕನ್ನಡ ಕಂಕಣ’ ಸ್ವಾಭಿಮಾನದ ಸಂಕೇತ: ನಾಗಾಭರಣ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 7:54 IST
Last Updated 23 ಫೆಬ್ರುವರಿ 2021, 7:54 IST
ಕನಕಪುರ ರಸ್ತೆಯ ಕನ್ನಡ ಬಳಗ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಮಕ್ಕಳಿಗೆ ‘ಕನ್ನಡ ಕಂಕಣ’ ತೊಡಿಸಿದರು. ಕಾರ್ಯಕ್ರಮ ಸಂಗಟಕಿ ಭಾರ್ಗವಿ ಹೇಮಂತ್‌ ಇದ್ದರು
ಕನಕಪುರ ರಸ್ತೆಯ ಕನ್ನಡ ಬಳಗ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಮಕ್ಕಳಿಗೆ ‘ಕನ್ನಡ ಕಂಕಣ’ ತೊಡಿಸಿದರು. ಕಾರ್ಯಕ್ರಮ ಸಂಗಟಕಿ ಭಾರ್ಗವಿ ಹೇಮಂತ್‌ ಇದ್ದರು   

ಬೆಂಗಳೂರು: ‘ಕನ್ನಡ ಕಂಕಣ’ವು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಲಿ ಎಂದುಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಆಶಿಸಿದರು.

ಕನಕಪುರ ರಸ್ತೆ ಕನ್ನಡ ಬಳಗದ ವತಿಯಿಂದ ಪ್ರತಿ ತಿಂಗಳು ಆಚರಿಸುವ ‘ಕನಕಪುರ ರಸ್ತೆಯಲ್ಲಿ ಕನ್ನಡ ನಾದ’ ಕಾರ್ಯಕ್ರಮದ ಅಂಗವಾಗಿ ನಡೆದ ‘ಕನ್ನಡ ಕಂಕಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಾಧಿಕಾರದ ವತಿಯಿಂದ ಆಚರಿಸುತ್ತಿರುವ ಕನ್ನಡ ಕಾಯಕ ವರ್ಷ ಕಾರ್ಯಕ್ರಮದ ಅಡಿಯಲ್ಲಿ ಹಲವಾರು ಕನ್ನಡ ಪರ ಯೋಜನೆಗಳು ಪ್ರಗತಿಯಲ್ಲಿದೆ. ಇದರ ಯಶಸ್ಸಿಗೆ ಕನ್ನಡಿಗರ ಸ್ಪಂದನ ಮತ್ತು ಬದ್ಧತೆ ಅಗತ್ಯ’ ಎಂದು ಹೇಳಿದರು.

ADVERTISEMENT

ಹಿರಿಯ ಹೋರಾಟಗಾರ ರಾ.ನಂ.ಚಂದ್ರಶೇಖರ ಮಾತನಾಡಿ, ‘ಕನ್ನಡ ಕಂಕಣ’ ಮಾದರಿಯಲ್ಲಿ ಇಲ್ಲಿ ಹಲವಾರು ಕಾರ್ಯಕ್ರಮಗಳು ನಡೆದಿವೆ. ‘ಉದ್ಯಾನವನದಲ್ಲಿ ಕನ್ನಡ’ ಎಂಬ ಕಾರ್ಯಕರಮವೂ ನಡೆದಿತ್ತು. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಬೇಕು ಎಂದು ಹೇಳಿದರು.

ಅಲೀಮ್, ಜ್ಞಾನ್ ಮಧು, ಲಲ್ಲೂ, ನಿಶಾ ಅವರಿಗೆ ಅಪ್ರತಿಮ ಕನ್ನಡಿಗ ಪ್ರಶಸ್ತಿ, ಅನುಪಮ, ಶ್ರೀನಾಥ್ ಅವರಿಗೆ ಉದಯೋನ್ಮುಖ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು. ಬಳಗದ ಅಧ್ಯಕ್ಷೆ ಭಾರ್ಗವಿ ಹೇಮಂತ್, ಕಾರ್ಯಕ್ರಮ ಪರಿಕಲ್ಪನೆ ರೂಪಿಸಿದ ಮಂಜುನಾಥ ಹಾಲುವಾಗಿಲು, ದಿಲೀಪ್‌ ಇದ್ದರು. ನೂರೈವತ್ತಕ್ಕೂ ಹೆಚ್ಚು ಮಂದಿಗೆ ‘ಕನ್ನಡ ಕಂಕಣ’ ತೊಡಿಸಿ ನಿರಂತರ ಕನ್ನಡ ಕಲಿಕೆ ಮತ್ತು ಬಳಕೆಯ ಪ್ರತಿಜ್ಞೆ ಬೋಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.