ಬೆಂಗಳೂರು: ‘ಅಕ್ಷರ ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯು ಯುವ ಕಥಾ ಸ್ಪರ್ಧೆಗೆ 35 ವರ್ಷದೊಳಗಿನವರಿಂದ ಕಥೆಗಳನ್ನು ಆಹ್ವಾನಿಸಿದೆ.
ಬಹುಮಾನಿತ ಕಥೆಗೆ ₹ 10 ಸಾವಿರ, ಒಪ್ಪಿತ ಎರಡು ಕಥೆಗಳಿಗೆ ತಲಾ ₹ 5 ಸಾವಿರ ನಗದು ಬಹುಮಾನವನ್ನು ಕೊಡಲಾಗುತ್ತದೆ. ಕಥೆಗಳಿಗೆ ಪದಗಳ ಮಿತಿಯಿಲ್ಲ. ಕಥೆಗಳು ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ಮಾಧ್ಯಮದಲ್ಲಿಪ್ರಕಟವಾಗಿರಬಾರದು. ಕಥೆಗಳು ನುಡಿ ತಂತ್ರಾಂಶದಲ್ಲಿರುವುದು ಕಡ್ಡಾಯ. ಜನ್ಮ ದಿನಾಂಕ ದೃಢೀಕರಣ ಪತ್ರದೊಂದಿಗೆ ಪರಿಚಯ, ಭಾವಚಿತ್ರ, ವಿಳಾಸವನ್ನು ಪ್ರತ್ಯೇಕ ಪುಟದಲ್ಲಿ ಲಗತ್ತಿಸಿರಬೇಕು.
ಕಥೆಗಳನ್ನು ಸೆ.30ರೊಳಗೆsangaata2018@gmail.comಗೆ ಕಳುಹಿಸಿಕೊಡಬೇಕು. ಬಹುಮಾನಿತ ಕಥೆಗಳನ್ನು ‘ಅಕ್ಷರ ಸಂಗಾತ’ ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ಸಂಪಾದಕ ಟಿ.ಎಸ್. ಗೊರವರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.