ADVERTISEMENT

ರೈತರಿಗೆ ಅನುಕೂಲ, ಉಳಿದವರಿಗೆ ತೆರಿಗೆ ಶೂಲ

ಅಧಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ತೆರಿಗೆ ಸೂತ್ರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 7:18 IST
Last Updated 5 ಜುಲೈ 2018, 7:18 IST
   

ಬೆಂಗಳೂರು: ಕೃಷಿ ಸಾಲ ಮನ್ನಾ ಮಾಡಲು ₹34 ಸಾವಿರ ಕೋಟಿ ಅಗತ್ಯವಿದ್ದು, ಇದರೊಂದಿಗೆ ರಾಜ್ಯದ ಅಭಿವೃದ್ಧಿಗೂ ಕ್ರಮವಹಿಸಲಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸಂಪನ್ಮೂಲ ಕ್ರೋಢೀಕರಣ ಮಾಡಲು ತೆರಿಗೆ ಹೆಚ್ಚಿಸುವ ಸೂತ್ರ ಬಳಕೆಯಾಗಿದೆ.

ಪೆಟ್ರೋಲ್‌ ತೆರಿಗೆಯನ್ನು ಶೇ 30ರಿಂದ ಶೇ 32ಕ್ಕೆ ಹಾಗೂ ಡೀಸೆಲ್‌ ಮೇಲಿನ ತೆರಿಗೆ ಶೇ 19ರಿಂದ ಶೇ 21ಕ್ಕೆ ಏರಿಕೆ ಪ್ರಸ್ತಾಪಿಸಲಾಗಿದೆ. ಇದರಿಂದಾಗಿ ಪೆಟ್ರೋಲ್‌ ಬೆಲೆಯಲ್ಲಿ ₹1.14 ಹಾಗೂ ಡೀಸೆಲ್‌ ಬೆಲೆಯಲ್ಲಿ ₹1.12 ಹೆಚ್ಚಳವಾಗಲಿದೆ.

ಅಬಕಾರಿ: ಮದ್ಯದ ಮೇಲೆ ಹಾಲಿ ಇರುವ ದರಗಳ ಮೇಲೆ ಶೇ 4ರಷ್ಟು ಏರಿಕೆಗೆ ಪ್ರಸ್ತಾಪಿಸಲಾಗಿದ್ದು, ಇದರಿಂದ 2018–19 ಆರ್ಥಿಕ ವರ್ಷಕ್ಕೆ ₹19,750 ಕೋಟಿ ರಾಜಸ್ವ ಸಂಗ್ರಹ ಗುರಿ ಹೊಂದಿದೆ.

ADVERTISEMENT

ಮೋಟಾರು ವಾಹನ ತೆರಿಗೆಯಲ್ಲಿಯೂ ಹೆಚ್ಚಳವಾಗಲಿದೆ. ಖಾಸಗಿ ವಾಹನ ತೆರಿಗೆಯನ್ನು ಹೆಚ್ಚಿಸಲಾಗುತ್ತಿದೆ. ಈಗಿನ ತೆರಿಗೆ ದರ ₹1,100, ₹1,200, ₹1,300 ಹಾಗೂ ₹1,500ನ್ನು ಕ್ರಮವಾಗಿ ₹1,650, ₹1,800, ₹1,950 ಹಾಗೂ ₹2,250ಕ್ಕೆ ಏರಿಕೆಯಾಗಲಿದೆ.

ವಿದ್ಯುತ್‌ ಬಳಕೆ ತೆರಿಗೆಯನ್ನು ಶೇ 6ರಿಂದ ಶೇ 9ಕ್ಕೆ ಹೆಚ್ಚಿಸಲಾಗುತ್ತಿದೆ. ಸ್ವಂತ ಬಳಕೆಯ ವಿದ್ಯುತ್‌ ಮೇಲಿನ ತೆರಿಗೆ ದರವನ್ನು ಪ್ರತಿ ಯೂನಿಟ್ ದರ 10ಪೈಸೆಯಿಂದ 20 ಪೈಸೆಗೆ ಏರಿಕೆಯಾಗಲಿದೆ.

2018–19ನೇ ಸಾಲಿನಲ್ಲಿ ಒಟ್ಟು ಜಮೆ ₹2,13,734 ಕೋಟಿ ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.