ADVERTISEMENT

ಲೋಕಸಭಾ ಚುನಾವಣೆ: ಮೊದ ಮೊದಲ ಮತದಾನ, ಸಂಭ್ರಮ–ಹೆಮ್ಮೆಯ ಸಮ್ಮಿಲನ 

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 8:04 IST
Last Updated 23 ಏಪ್ರಿಲ್ 2019, 8:04 IST
   

ಕರ್ನಾಟಕದಲ್ಲಿ ಮಂಗಳವಾರ ನಡೆಯುತ್ತಿರುವ ಎರಡನೇ ಹಂತದ ಲೋಕಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯೆಯಲ್ಲಿ ಹಲವು ಯುವಕ–ಯುವತಿಯರು ಮೊದಲ ಬಾರಿಗೆ ಮತದಾನ ಮಾಡಿ ಹೆಮ್ಮೆ ಪಟ್ಟರು.

ದೇಶದ ಭವಿಷ್ಯ ರೂಪಿಸುವ ಸರ್ಕಾರ, ಕ್ಷೇತ್ರದ ಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಹಾಗೂ ಹಕ್ಕನ್ನು ಯಶಸ್ವಿಯಾಗಿ ಪೂರೈಸಿದ ಸಂತಸದಲ್ಲಿ ಶಾಹಿ ಹಾಕಿದ ಬೆರಳೊಡ್ಡಿಫೋಟೊಗೆ ನಿಲ್ಲುತ್ತಿದ್ದುದು ಸಾಮಾನ್ಯವಾಗಿತ್ತು.

* ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ 172 ನೇ ಮತಗಟ್ಟೆಯಲ್ಲಿ ಸಹೋದರಿಯರಾದ ಸೀಮಾ ತಹಶೀಲ್ದಾರ್ ಮತ್ತು ರುಬಿಯಾ ತಹಶೀಲ್ದಾರ್ ಪ್ರಥಮ ಬಾರಿಗೆ ತಮ್ಮ ಹಕ್ಕು ಚಲಾಯಿಸಿದರು. ಈ ಮೂಲಕ ದೇಶಕ್ಕೆ ಸಮರ್ಥ ಮತ್ತು ಬಡವರ ಪರ ಕಾಳಜಿ ಇರುವವರು ಆಯ್ಕೆಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ADVERTISEMENT

* ರಾಯಚೂರು:ಕವಿತಾಳ ಸಮೀಪದ ಬಸಾಪುರದಲ್ಲಿ ಮೊದಲ ಮತ ಚಲಾಯಿಸಿದ ಖುಷಿಯಲ್ಲಿ ವಿದ್ಯಾರ್ಥಿನಿ ವಿರೇಶಮ್ಮ

* ನಾನು ಮಧುರ ಬಿರಾದಾರ್ ನಾನು ಇಂದು ನನ್ನ ಮೊದಲನೆಯ ಮತದಾನವನ್ನು ಪ್ರಾದೇಶಿಕ ಸಾರಿಗೆ ಇಲಾಖೆಯ ಮತಗಟ್ಟೆಯಲ್ಲಿ ಮಾಡಿದ್ದೇನೆ. ಮತದಾನ ಮಾಡಲಿಕ್ಕೆ ನಾನು ಗದಗನಿಂದ ರಾಯಚೂರಿಗೆ ಬಂದಿದ್ದೇನೆ. ಮತದಾನ ಮಾಡಿದ್ದು ನನಗೆ ಹೆಮ್ಮೆಯ ವಿಷಯ.

* ದಾವಣಗೆರೆ ಲೋಕಸಭಾ ಕ್ಷೇತ್ರದ ಆಲೂರಹಟ್ಟಿ ಮತಗಟ್ಟೆಗೆ ಬಂದ ಕಾಲೇಜು ವಿದ್ಯಾರ್ಥಿಗಳು ಮೊದಲ ಬಾರಿಗೆ ಮತದಾನದ ಹಕ್ಕು ಚಲಾಯಿಸಲು ಕಾತರದಿಂತ ಕಾಯುತ್ತಿದ್ದರು

* ಚಿಕ್ಕೋಡಿ ಕ್ಷೇತ್ರದ ಹುಕ್ಕೇರಿಯಲ್ಲಿ ಗೌತಮಿ ಸೊಲ್ಲಾಪುರೆ ಹಾಗೂ ನವಮಿ ಸೊಲ್ಲಾಪುರೆ ಇದೇ ಮೊದಲಿಗೆ ಮತದಾನ ಮಾಡಿದರು.

* ಮೊದಲ ಬಾರಿಗೆ ಮತ ಚಲಾವಣೆ ಮಾಡಿದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ

ಬಳ್ಳಾರಿ:ವ್ಯಾಸಂಗಕ್ಕಾಗಿ ವಿದೇಶದಲ್ಲಿದ್ದ ಜಿ.ಕಿರೀಟಿ ರೆಡ್ಡಿ ಮತ ಚಲಾವಣೆ ಮಾಡಲು ನಾಲ್ಕು ದಿನ ಮೊದಲೇ ಬಳ್ಳಾರಿಗೆ ಬಂದು, ಮಂಗಳವಾರ ಮೊದಲ ‌ಬಾರಿಗೆ ತಮ್ಮ ಮತ ಹಕ್ಕನ್ನು ಚಲಾಯಿಸಿದರು. ಅಮ್ಮ ಲಕ್ಷ್ಮಿ ಅರುಣಾ, ತಾತ ಪರಮೇಶ್ವರ ರೆಡ್ಡಿ, ಅಜ್ಜಿ ನಾಗ ಲಕ್ಷ್ಮಮ್ಮ, ಸೋದರಿ ಬ್ರಹ್ಮಿಣಿ ಅವರೊಂದಿಗೆ ಅವಂಬಾವಿಯ ಮತಗಟ್ಟೆ ಸಂಖ್ಯೆ 5 ರಲ್ಲಿ ಮತದಾನ ಮಾಡಿದರು.

* ಹೊಸಪೇಟೆಯ ಸಪ್ತಗಿರಿ ಶಾಲೆ ಮತಕೇಂದ್ರದಲ್ಲಿ ಮತದಾನ ಮಾಡಿದ ಯುವತಿ

* ದಾವಣಗೆರೆಯಲ್ಲಿ ಸಮೀನಾಬಾನುಗೆ ಮೊದಲ ಬಾರಿಗೆ ಮತದಾನ ಮಾಡಿದ ಖುಷಿ

* ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಕೇಶ್ವರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ರುಕ್ಸಾನಾ ಶೇಖ್ ಇದೇ ಮೊದಲಿಗೆ ಮತ ಚಲಾಯಿಸಿದರು. ಹೆಮ್ಮೆ ಹಾಗೂ ಖುಷಿಯಾಗುತ್ತಿರುವುದಾಗಿ ತಿಳಿಸಿದರು.

* ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಮತಗಟ್ಟೆ: ಪ್ರಥಮ ಬಾರಿ ಮತದಾನ ಮಾಡಿದ ಖುಷಿಯಲ್ಲಿ ಅನಿತಾ

* ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಕೇಶ್ವರದಲ್ಲಿ ಅವಳಿ- ಜವಳಿ ಸಹೋದರಿಯರಾದ ಸರಸ್ವತಿ ಸಮ್ಮಣ್ಣವರ ಹಾಗೂ ಲಕ್ಷ್ಮಿ ಸಮ್ಮಣ್ಣವರ ಜೊತೆಯಾಗಿ ಬಂದು ಮತ ಚಲಾಯಿಸಿದರು. ಇವರಿಬ್ಬರೂ ಬಿಎಸ್ಸಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ’ಮತದಾನ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ಹೆಮ್ಮೆಯಾಗುತ್ತಿದೆ. ಎಲ್ಲರೂ ಒಳ್ಳೆಯ ಅಭ್ಯರ್ಥಿಗೆ ಮತ ಹಾಕಬೇಕು. ಒಂದು ಮತಕ್ಕೂ ತನ್ನದೇ ಆದ ಮೌಲ್ಯವಿದೆ’ ಎಂದರು.

* ಚಿಕ್ಕೋಡಿ ‌ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಮಕನಮರಡಿಯಲ್ಲಿ ಮೊದಲಿಗೆ ಮತದಾನ ಮಾಡಿದ ಶ್ವೇತಾ ಯರಮಳ್ಳಿ. ’ನಮ್ಮನ್ನು ಆಳುವವರನ್ನು ಆಯ್ಕೆ ಮಾಡಿಕೊಳ್ಳುವುದು ಹೆಮ್ಮೆಯ ವಿಷಯ. ಹೀಗಾಗಿ ಖುಷಿಯಾಗಿದೆ. ಮತ ಚಲಾಯಿಸಲು ಯಾವುದೇ ತೊಂದರೆ ಆಗಲಿಲ್ಲ. ಕಾಲೇಜಿನಲ್ಲಿ ಪ್ರಾತ್ಯಕ್ಷಿಕೆ ನೀಡಿದ್ದರಿಂದ ಪ್ರಕ್ರಿಯೆ ಗೊತ್ತಾಗಿತ್ತು. ಯುವ ಜನರಿಗೆ ಉದ್ಯೋಗ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

* ಬಳ್ಳಾರಿ ತಾಲ್ಲೂಕಿನ ಶ್ರೀಧರ ಗಡ್ಡೆ ಗ್ರಾಮದ ಮತಗಟ್ಟೆಯಲ್ಲಿ ಮೊದಲ ‌ಬಾರಿಗೆ‌ ಮತ ಚಲಾಯಿಸಲು ನಿಂತಿದ್ದ ಅನಿತಾ

*ಬೆಂಗಳೂರಿನ ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿರುವ ದಾವಣಗೆರೆಯ ವಿದ್ಯಾರ್ಥಿ ಚೈತನ್ಯ ಮೊದಲ ಬಾರಿಗೆ ಮತದಾನದ ಹಕ್ಕನ್ನು ಚಾಲಾಯಿಸಿ ಸಂಭ್ರಮಿಸಿದ ಕ್ಷಣ. ಬೆಳಿಗ್ಗೆ ತರಾತುರಿಯಲ್ಲೇ ಮತ ಚಲಾಯಿಸಿ ಇಂಟರ್‌ಸಿಟಿ ರೈಲಿಗೆ ಬೆಂಗಳೂರಿಗೆ ಹೊರಟರು

* ಬಳ್ಳಾರಿಯ ಸರಳಾ ದೇವಿ ಸತೀಶ್ ಚಂದ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ಹೂರ್ ಪರ್ವಿನ್ ಮತ್ತು ಮೌನಿಕ

* ಬಳ್ಳಾರಿಯ ಬಾಲಕಿಯರ ಸರ್ಕಾರಿ‌ ಪದವಿ‌ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಎಂಜಿನಿಯರಿಂಗ್ ‌ವಿದ್ಯಾರ್ಥಿ‌ ಸನಾ ಮತ್ತು ವೈದ್ಯಕೀಯ ವಿದ್ಯಾರ್ಥಿನಿ ಆಫ್ರಿನ್ ಮೊದಲ ಬಾರಿಗೆ ಮತದಾನ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.