ADVERTISEMENT

ಬೆಳಗಾವಿ ಅಧಿವೇಶನ; ಫಲಶ್ರುತಿ ಇಲ್ಲ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 19:45 IST
Last Updated 22 ಡಿಸೆಂಬರ್ 2021, 19:45 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೇವಲ ಚರ್ಚೆಯಾಗುತ್ತಿದೆ. ಆದರೆ ಫಲಿತಾಂಶ ಬರುತ್ತಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ವಿರೋಧ ಪಕ್ಷವಾಗಿ ಕಾಂಗ್ರೆಸ್ ತನ್ನ ಕೆಲಸ ಮಾಡಿದೆ. ನಮ್ಮ ಸಲಹೆಗೆ ‘ನೋಡುತ್ತೇವೆ, ಮಾಡುತ್ತೇವೆ’ ಎಂದು ಸರ್ಕಾರ ಹೇಳುತ್ತದೆ. ಹೀಗಾಗಿ, ಬೆಳಗಾವಿ ಅಧಿವೇಶನ ವಿಫಲ ಎನ್ನಬೇಕು’ ಎಂದರು. ‘ಕಿತ್ತೂರು ಕರ್ನಾಟಕ ವಿಷಯದಲ್ಲೂ ಹಾಗೇ ಆಗಿದೆ. ಘೋಷಣೆ ಮಾಡಿದರು, ದುಡ್ಡು ಕೊಡಬೇಕಲ್ಲ’ ಎಂದು ಪ್ರಶ್ನಿಸಿದರು.

‘ಎಂಇಎಸ್‌ ಕುರಿತು ಹೇಳುವುದೇನಿದೆ ? ಗಲಾಟೆ ಮಾಡಿದವರನ್ನು ಹಿಡಿದು ಒಳಗೆ ಹಾಕಬೇಕು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.