ADVERTISEMENT

ಕರ್ನಾಟಕ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿಗಳು ಪ್ರಕಟ

ಗೌರವ ಪ್ರಶಸ್ತಿಯು ₹50 ಸಾವಿರ ನಗದು, ವಾರ್ಷಿಕ ಪ್ರಶಸ್ತಿ ₹25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 14:35 IST
Last Updated 2 ಡಿಸೆಂಬರ್ 2024, 14:35 IST
<div class="paragraphs"><p>ಪ್ರಶಸ್ತಿ ಪುರಸ್ಕೃತರು</p></div>

ಪ್ರಶಸ್ತಿ ಪುರಸ್ಕೃತರು

   

ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿ 2023 ಹಾಗೂ 2024ನೇ ಸಾಲಿನ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್. ದುರ್ಗಾದಾಸ, ಗೌರವ ಪ್ರಶಸ್ತಿಯು ₹50 ಸಾವಿರ ನಗದು, ವಾರ್ಷಿಕ ಪ್ರಶಸ್ತಿ ₹25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಡಿಸೆಂಬರ್ ಕೊನೆ ವಾರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದರೊಂದಿಗೆ 2021, 2022ನೇ ಸಾಲಿನ ಪ್ರಶಸ್ತಿಗಳ ವಿತರಣೆ ಬಾಕಿ ಇದ್ದು, ಅವುಗಳನ್ನೂ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು ಎಂದರು.

ADVERTISEMENT

2023-24ನೇ ಸಾಲಿನ ಗೌರವ ಪ್ರಶಸ್ತಿ: ಮೈಸೂರು ಜಿಲ್ಲೆಯ ಡಿ.ಕೆ.ರಾಜೇಂದ್ರ (ಬಯಲಾಟ ವಿದ್ವಾಂಸ), ಬೆಳಗಾವಿ ಜಿಲ್ಲೆಯ ಸಿದ್ರಾಮ ನಾಯಕ (ಸಣ್ಣಾಟ), ಬಾಗಲಕೋಟೆಯ ನಾರಾಯಣ ಪತ್ತಾರ (ಶ್ರೀಕೃಷ್ಣ ಪಾರಿಜಾತ), ಬಳ್ಳಾರಿಯ ಓಂಕಾರಮ್ಮ (ದೊಡ್ಡಾಟ), ಕೊಪ್ಪಳದ ಕೆ.ಇಮಾಮ್‍ಸಾಬ್ (ದೊಡ್ಡಾಟ).

ವಾರ್ಷಿಕ ಪ್ರಶಸ್ತಿ: ವಿಜಯಪುರದ ಕೆ.ರಾಮಚಂದ್ರಪ್ಪ (ದೊಡ್ಡಾಟ), ಬಾಗಲಕೋಟೆಯ ಕೃಷ್ಣಪ್ಪ ಪೂಜಾರ (ಶ್ರೀಕೃಷ್ಣ ಪಾರಿಜಾತ), ಚಿತ್ರದುರ್ಗದ ಕೆ.ಎಂ.ರಘುಪಾಲಯ್ಯ, ಹಾವೇರಿಯ ಮಲ್ಲೇಶಪ್ಪ ಭಜಂತ್ರಿ, ರಾಯಚೂರಿನ ಅಮರೇಶ ತಿಮ್ಮಯ್ಯ (ದೊಡ್ಡಾಟ), ಬೆಳಗಾವಿಯ ಚಂದ್ರವ್ವ ನೀಲಪ್ಪನವರ (ಸಣ್ಣಾಟ), ದಾವಣಗೇರೆಯ ಎಂ.ಬಡಪ್ಪ (ದೊಡ್ಡಾಟ), ವಿಜಯಪುರದ ರುದ್ರಪ್ಪ ಸಾಳುಂಕೆ (ಬಯಲಾಟ), ವಿಜಯನಗರದ ಚುಕ್ಕನಕಲ್ಲು ರಾಮಣ್ಣ (ದೊಡ್ಡಾಟ), ತುಮಕೂರಿನ ತಿಪ್ಪಣ್ಣ ದೊಡ್ಡೆಗೌಡ (ಮೂಡಲಯಪಾಯ ಬಯಲಾಟ).

2024-25ನೇ ಸಾಲಿನ ಗೌರವ ಪ್ರಶಸ್ತಿ: ಬಳ್ಳಾರಿ ಜಿಲ್ಲೆಯ ಎಚ್.ಎಂ.ಪಂಪಯ್ಯಸ್ವಾಮಿ, ವಿಜಯನಗರದ ಗಂಗಮ್ಮ, ಕೊಪ್ಪಳದ ತಿಮ್ಮಣ್ಣ ಚನ್ನದಾಸರ (ದೊಡ್ಡಾಟ), ಬಾಗಲಕೋಟೆಯ ಈಶ್ವರಪ್ಪ ಹಲಗಣಿ (ಶ್ರೀಕೃಷ್ಣ ಪಾರಿಜಾತ), ವಿಜಯಪುರದ ಶಿವಣ್ಣ ಬಿರಾದಾರ (ದೊಡ್ಡಾಟ).

ವಾರ್ಷಿಕ ಪ್ರಶಸ್ತಿ: ಚಿತ್ರದುರ್ಗದ ಗುಗ್ ಮಲ್ಲಯ್ಯ (ದೊಡ್ಡಾಟ), ಬೆಳಗಾವಿಯ ಭರಮಪ್ಪ ಸತ್ತೆನ್ನವರ (ಶ್ರೀಕೃಷ್ಣ ಪಾರಿಜಾತ), ದಾವಣಗೆರೆಯ ಬಾಲಮ್ಮ ಕಾಟಪ್ಪ, ವಿಜಯನಗರದ ಡಿ.ಎಂ.ಯರಿಸ್ವಾಮಿ (ದೊಡ್ಡಾಟ), ಬಾಗಲಕೋಟೆಯ ಗ್ಯಾನಪ್ಪ ಮಾದರ (ಶ್ರೀಕೃಷ್ಣ ಪಾರಿಜಾತ), ತುಮಕೂರಿನ ಶಂಕರಪ್ಪ ಎ.ಬಿ (ಮೂಡಲಪಾಯ ಬಯಲಾಟ), ವಿಜಯನಗರದ ಕೊಟ್ಗಿ ಹಾಲೇಶ್ವರ (ದೊಡ್ಡಾಟ, ನೇಪಥ್ಯ), ವಿಜಯಪುರದ ರುದ್ರಗೌಡ ಬಿರಾದಾರ, ಧಾರವಾಡದ ಚೆನ್ನವೀರಪ್ಪ ಮುದಲಿಂಗಣ್ಣವರ (ದೊಡ್ಡಾಟ) ಹಾಗೂ ಬಳ್ಳಾರಿ ಜಿಲ್ಲೆಯ ಕೆ.ಹೊನ್ನೂರಸ್ವಾಮಿ (ತೊಗಲು ಗೊಂಬೆಯಾಟ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.